
ಕ್ರೊಯೇಷಿಯಾದ ಪ್ರಯಾಣದ ಪ್ರಭಾವಶಾಲಿ ದಂಪತಿಗಳಾದ ಕ್ರಿಸ್ಟಿಜನ್ ಇಲಿಸಿಕ್ ಮತ್ತು ಆಂಡ್ರಿಯಾ ಟ್ರೊಗೊವ್ಸೆವಿಕ್ ಅವರು ತಮ್ಮ ಮಧುಚಂದ್ರದ ಸಮಯದಲ್ಲಿ ವಾಯುವ್ಯ ಆಫ್ರಿಕಾದ ಮೌರಿಟಾನಿಯಾದಲ್ಲಿ ಏನಾದರೂ ವಿಶಿಷ್ಟವಾದದ್ದನ್ನು ಮಾಡಲು ಬಯಸಿದ್ದರು. ಆದ್ದರಿಂದ, ಅವರು 20 ಗಂಟೆಗಳ ದೀರ್ಘ ಪ್ರಯಾಣಕ್ಕಾಗಿ ಟ್ರೈನ್ ಡು ಡೆಸರ್ಟ್ ಎಂದು ಕರೆಯಲ್ಪಡುವ ರೈಲಿನಲ್ಲಿ ಭಯಾನಕ ಫೋಟೋಶೂಟ್ ಮಾಡಿದ್ದಾರೆ. 2 ಕಿ.ಮೀ ಉದ್ದದ ಸರಕು ರೈಲು ಕೇವಲ ಕಬ್ಬಿಣದ ಅದಿರನ್ನು ಒಯ್ಯುತ್ತದೆ. ಇದರಲ್ಲಿ ನಿಂತು ದಂಪತಿ ಫೋಟೋಶೂಟ್ ಮಾಡಿದ್ದಾರೆ. ಇಬ್ಬರೂ ಕೂಡ ಮದುವೆಯ ಧಿರಿಸು ಧರಿಸಿದ್ದು, ಫೋಟೋಗೆ ಅದ್ಭುತ ಫೋಸ್ ನೀಡಿದ್ದಾರೆ.
ಈ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸಂಪೂರ್ಣವಾಗಿ ವಿಸ್ಮಯಗೊಂಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ದಂಪತಿ ಹಾಗೂ ಫೋಟೋಗ್ರಾಫರ್ ನನ್ನು ಬಳಕೆದಾರರು ಹಾಡಿ ಹೊಗಳಿದ್ದಾರೆ. ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ಅದ್ಭುತ ಫೋಟೋ ಸೆರೆಹಿಡಿದಿದ್ದಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.