ಸೌಂದರ್ಯ ನೋಡುವವರ ದೃಷ್ಟಿಯಲ್ಲಿರುತ್ತದೆ ಅನ್ನೋದು ಸತ್ಯವಾದ ಮಾತು. ನಮಗೆ ಅಂದವಾಗಿ ಕಂಡವರು, ಬೇರೊಬ್ಬರಿಗೆ ಅಷ್ಟೇನೂ ಸುಂದರವಾಗಿಲ್ಲ ಎನಿಸಬಹುದು. ಜಗತ್ತಿನಲ್ಲಿ ಸುಂದರಿಯರಿಗೇನೂ ಬರವಿಲ್ಲ. ಭಾರತದಿಂದ ಹಿಡಿದು ಬಹಳಷ್ಟು ದೇಶಗಳಲ್ಲಿ ಜಗದೇಕ ಸುಂದರಿಯರಿದ್ದಾರೆ. ಅವರಲ್ಲಿ ಐವರ ಬಗ್ಗೆ ನಾವು ತಿಳಿದುಕೊಳ್ಳೋಣ.
ಸೆಲೆನಾ ಗೋಮ್ಜ್: ಗೊಮೆಜ್: ಸೆಲೆನಾ ಗೋಮ್ಜ್ ಪ್ರಖ್ಯಾತ ಹಾಲಿವುಡ್ ಗಾಯಕಿ. ನಟಿಯೂ ಆಗಿರೋ ಈಕೆ ಅತ್ಯಂತ ಚೆಲುವೆ. ಇನ್‌ಸ್ಟಾಗ್ರಾಮ್ನಲ್ಲಿ ಈಕೆಗೆ ಸಾಕಷ್ಟು ಫಾಲೋವರ್ಸ್ ಇದ್ದಾರೆ. ಈ ಚೆಲುವೆಯ ವೈಯಕ್ತಿಕ ಬದುಕು, ಪ್ರೇಮ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ.
ದೀಪಿಕಾ ಪಡುಕೋಣೆ: ಗುಳಿಕೆನ್ನೆಯ ಸುಂದರಿ ದೀಪಿಕಾ ಪಡುಕೋಣೆ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತಿದೆ. ನಟನೆ ಮತ್ತು ಸೌಂದರ್ಯದಿಂದ ಅನೇಕರ ಹೃದಯ ಗೆದ್ದಿದ್ದಾಳೆ ಈಕೆ. ಭಾರತದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ದೀಪಿಕಾಳ ಸೌಂದರ್ಯ ಹೆಸರುವಾಸಿಯಾಗಿದೆ.
ಎನ್. ಇಮ್ ಜಿನ್ ಆಹ್: ದಕ್ಷಿಣ ಕೊರಿಯಾದ ನಟಿ ಇವಳು. ಇವಳ ಸೌಂದರ್ಯ ಯಾರಿಗೂ ಕಡಿಮೆಯಿಲ್ಲ. ಚಲನಚಿತ್ರಗಳಲ್ಲಿ ಮಾತ್ರವಲ್ಲದೆ ಹಾಡುಗಾರಿಕೆ ಮತ್ತು ಮಾಡೆಲಿಂಗ್‌ನಲ್ಲೂ ಜನಪ್ರಿಯತೆ ಪಡೆದಿದ್ದಾಳೆ. ಅಭಿಮಾನಿಗಳು ಈಕೆಯನ್ನು ನಾನಾ ಹೆಸರಿನಿಂದ ಕರೆಯುತ್ತಾರೆ.
ಪಿಕ್ಸೀ ಲೋಟ್: ಐದನೇ ವಯಸ್ಸಿನಲ್ಲಿ ಹಾಡಲು ಪ್ರಾರಂಭಿಸಿದ ಪಿಕ್ಸೀ ಲೋಟ್ ಚೆಲುವೆಯೂ ಹೌದು. ಈಕೆಯ ಸೌಂದರ್ಯ ಅನೇಕರನ್ನು ಮೊದಲ ನೋಟದಲ್ಲೇ ಹುಚ್ಚರನ್ನಾಗಿ ಮಾಡುತ್ತದೆ. ‘ಬಾಯ್ಸ್ ಅಂಡ್ ಗರ್ಲ್ಸ್’ ಆಲ್ಬಂ ಮೂಲಕ ಪಿಕ್ಸೀ ಹೆಸರು ಮಾಡಿದ್ದಾಳೆ.
ಲಿಜಾ ಸೊಬೆರಾನೊ: ನಟನೆ ಮತ್ತು ಮಾಡೆಲಿಂಗ್ನಲ್ಲಿ ಮಿಂಚುತ್ತಿರುವ ಲಿಜಾ ಸೊಬೆರಾನೊ ಕೂಡ ಸುರ ಸುಂದರಿ. ಆರಂಭದಲ್ಲಿ ದೂರದರ್ಶನದಲ್ಲಿ ಕೆಲಸ ಮಾಡ್ತಿದ್ದ ಲಿಸಾ, ತನ್ನ ಚೆಲುವಿನಿಂದಲೇ ಎಲ್ಲರನ್ನು ಸೆಳೆದಿದ್ದಳು.