ವಿಶ್ವದಲ್ಲಿ ನೂರಾರು ದೇಶಗಳಿವೆ. ಪ್ರತಿ ದೇಶವೂ ಬೇರೆ ಬೇರೆ ಜನಸಂಖ್ಯಾ ಬಲ ಹೊಂದಿದೆ.
ಆದರೆ ಭಾರತದ ರಾಜ್ಯಕ್ಕಿಂತಲೂ ತೀರಾ ಚಿಕ್ಕದಾದ ದೇಶವಿದೆ ಅಂತಾ ನಿಮ್ಗೆ ಗೊತ್ತಾ!? ಕೆಲವೊಂದು ದೇಶ ಎಷ್ಟು ಚಿಕ್ಕದಾಗಿದೆ ಎಂಬುದನ್ನು ಕೇಳಿದರೆ ಆಶ್ಚರ್ಯವಾಗುತ್ತದೆ. ವಿಶ್ವದ ಅತಿ ಚಿಕ್ಕ ದೇಶಗಳ ಬಗ್ಗೆ ಇಲ್ಲಿದೆ ವಿವರ.
ಯುರೋಪ್ ಖಂಡದಲ್ಲಿರುವ ವ್ಯಾಟಿಕನ್ ಸಿಟಿ ದೇಶವನ್ನು ವಿಶ್ವದ ಅತ್ಯಂತ ಚಿಕ್ಕ ದೇಶವೆಂದು ಪರಿಗಣಿಸಲಾಗಿದೆ. ಈ ದೇಶ ಕೇವಲ 44 ಹೆಕ್ಟೇರ್ ಭೂಮಿ ಹೊಂದಿದ್ದು, ಈ ದೇಶದ ಜನಸಂಖ್ಯೆ ಕೇವಲ 840 ಮಾತ್ರ. ಕ್ಯಾಥೆಡ್ರಲ್, ಸಮಾಧಿ, ವಸ್ತುಸಂಗ್ರಹಾಲಯ ಇತ್ಯಾದಿಗಳು ಇಲ್ಲಿ ಆಕರ್ಷಣೆಯ ಕೇಂದ್ರಗಳಾಗಿವೆ.
ವ್ಯಾಟಿಕನ್ ನಗರದ ನಂತರ, ಮೊನಾಕೊ ವಿಶ್ವದ ಎರಡನೇ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶ. 2.02 ಚದರ ಕಿಲೋಮೀಟರ್ ವಿಸ್ತೀರ್ಣವಿರುವ ಈ ದೇಶದ ಒಟ್ಟು ಜನಸಂಖ್ಯೆಯು 2016 ರ ಜನಗಣತಿಯ ಪ್ರಕಾರ ಸುಮಾರು 38,499 ಆಗಿದೆ.
ನೌರು ಪೆಸಿಫಿಕ್ ಮಹಾಸಾಗರದಲ್ಲಿರುವ ಒಂದು ದ್ವೀಪ ದೇಶ. ಈ ದೇಶದ ವಿಸ್ತೀರ್ಣ 21.3 ಚದರ ಕಿಲೋಮೀಟರ್. 2016 ರ ಜನಸಂಖ್ಯಾ ಗಣತಿಯ ಪ್ರಕಾರ, ಈ ದೇಶದ ಒಟ್ಟು ಜನಸಂಖ್ಯೆ ಸುಮಾರು 13,049 ಆಗಿದೆ.
ಸ್ಯಾನ್ ಮರಿನೋ ಯುರೋಪಿನ ಅತ್ಯಂತ ಹಳೆಯ ದೇಶ. ವಿಶ್ವದ 5 ನೇ ಚಿಕ್ಕ ದೇಶವಾಗಿರುವ ಸ್ಯಾನ್ ಮರಿನೋ ಭಾಷೆ ಇಟಾಲಿಯನ್ ಆಗಿದ್ದು ಜನಸಂಖ್ಯೆ ಸುಮಾರು 33,203.
ತುವಾಲುವನ್ನು ವಿಶ್ವದ ನಾಲ್ಕನೇ ಚಿಕ್ಕ ದೇಶ. ಇದು ಪೆಸಿಫಿಕ್ ಸಾಗರದಲ್ಲಿದೆ. ಈ ದೇಶವು ಹಿಂದೆ ಬ್ರಿಟನ್‌ನ ಆಡಳಿತದಲ್ಲಿದ್ದ ಈ ದೇಶದ ವಿಸ್ತೀರ್ಣ 26 ಚದರ ಕಿಲೋಮೀಟರ್, ಜನಸಂಖ್ಯೆಯು ಅಂದಾಜು 11,097 ಆಗಿದೆ.
ಪಶ್ಚಿಮ ಯುರೋಪಿನಲ್ಲಿರುವ ಲಿಚ್ಟೆನ್‌ಸ್ಟೈನ್ ವಿಶ್ವದ ಆರನೇ ಚಿಕ್ಕ ದೇಶ. ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ದೇಶದ ಜೊತೆ ಗಡಿ ಹಂಚಿಕೊಂಡಿರುವ ಈ ದೇಶದ ಜನಸಂಖ್ಯೆಯು ಸುಮಾರು 37,666.
ಅಟ್ಲಾಂಟಿಕ್ ಸಾಗರದಲ್ಲಿನ ಮಾರ್ಷಲ್ ದ್ವೀಪಗಳ ವಿಸ್ತೀರ್ಣ 181 ಚದರ ಕಿಲೋಮೀಟರ್ ಮತ್ತು ಜನಸಂಖ್ಯೆ ಅಂದಾಜು 53,066.
ಮಾಲ್ಡೀವ್ಸ್- ವಿಶ್ವದ ಸಣ್ಣ ದೇಶಗಳಲ್ಲಿ ಎಣಿಸಲಾಗಿದ್ದರೂ, ಪ್ರವಾಸೋದ್ಯಮದ ದೃಷ್ಟಿಯಿಂದ ಈ ದೇಶ ವಿಶ್ವ ಪ್ರಸಿದ್ಧ. ಹಿಂದೂ ಮಹಾಸಾಗರದ ಮುತ್ತು ಎಂದೂ ಕರೆಯುವ ಈ ದೇಶದ ಜನಸಂಖ್ಯೆ 4 ಲಕ್ಷ 17 ಸಾವಿರ.