
ನಾಳೆಯ ಚುನಾವಣಾ ಫಲಿತಾಂಶದ ಟೆನ್ಶನ್ ನಡುವೆಯೇ ಪಂಜಾಬ್ ಸಿಎಂ ಚರಣ್ಜೀತ್ ಸಿಂಗ್ ಚನ್ನಿ ಮೇಕೆಯ ಹಾಲನ್ನು ಕರೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಚರಣ್ಜೀತ್ ಸಿಂಗ್ ಚನ್ನಿ ತಮ್ಮ ಅಮೂಲ್ಯ ಸಮಯವನ್ನು ಮೇಕೆ ಹಾಲು ಕರೆಯಲು ಏಕೆ ವ್ಯಯಿಸುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಮೇಕೆಯ ಹಾಲನ್ನು ಕರೆಯಲು ಮತದಾರರು ನಿಮ್ಮನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿಲ್ಲ. ಮುಖ್ಯಮಂತ್ರಿಗಳ ಪ್ರತಿಯೊಂದು ನಿಮಿಷವೂ ಅಮೂಲ್ಯವಾಗಿರುತ್ತದೆ. ಉದ್ಯೋಗೀಕರಣ, ಶಿಕ್ಷಣದ ಗುಣಮಟ್ಟ ಹಾಗೂ ಮಾದಕ ದ್ರವ್ಯ ಸೇವನೆಯನ್ನು ನಿರ್ಬಂಧಿಸುವುದು ಹೀಗೆ ನಾನಾ ಸಮಸ್ಯೆಗಳತ್ತ ನೀವು ಗಮನಹರಿಸಬೇಕು ಎಂದು ನೆಟ್ಟಿಗರು ಕಮೆಂಟ್ ವಿಭಾಗದಲ್ಲಿ ಕಿಡಿಕಾರಿದ್ದಾರೆ.