
ಕತರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿರುವ ತಮ್ಮ ಅರಣ್ಯ ವಿಶ್ರಾಂತಿ ಗೃಹದ ಮುಂಭಾಗದ ಅಂಗಳದಲ್ಲಿ ಚಿರತೆ ಅಡ್ಡಾಡುತ್ತಿರುವ ಫೋಟೋವನ್ನು ಐಎಫ್ಎಸ್ ಅಧಿಕಾರಿ ಆಕಾಶ್ ದೀಪ್ ಬಧವನ್ ಟ್ವೀಟ್ ಮಾಡಿದ್ದಾರೆ. ಚಿರತೆಯನ್ನು ನೋಡಿದಾಗ ಅರಣ್ಯಾಧಿಕಾರಿಗೆ ರಸ್ಕಿನ್ ಬಾಂಡ್ನ ಜನಪ್ರಿಯ ಕಥೆಗಳಲ್ಲಿ ಒಂದಾದ ಎ ಟೈಗರ್ ಇನ್ ದಿ ಹೌಸ್ ಕಥೆ ನೆನಪಾಯಿತಂತೆ. ಬಧವಾನ್ ತನ್ನ ಕಾರಿನೊಳಗೆ ಕುಳಿತಿದ್ದಾಗ ಈ ಫೋಟೋ ಕ್ಲಿಕ್ಕಿಸಿದ್ದಾರೆ.
ರಸ್ಕಿನ್ ಬಾಂಡ್ ಕಥೆಯಂತೆ, ಈ ಚಿರತೆಯನ್ನು ಫಾರೆಸ್ಟ್ ರೆಸ್ಟ್ ಹೌಸ್ನ ಹೊರಗೆ ಭೇಟಿಯಾದೆ. ಕಳೆದ ರಾತ್ರಿ ನಾವು ಪರಸ್ಪರರ ಕಂಪನಿಯಲ್ಲಿ ಉತ್ತಮ ಸಮಯವನ್ನು ಕಳೆದಿದ್ದೇವೆ. ಕತರ್ನಿಯಾಘಾಟ್ನ 120 ವರ್ಷಕ್ಕಿಂತ ಹಳೆಯದಾದ ಈ ಎಫ್ಆರ್ಎಚ್ನ ಗೋಡೆಗಳಲ್ಲಿ ತುಂಬಾ ವನ್ಯಜೀವಿ ಇತಿಹಾಸವಿದೆ ಎಂದು ಬಧವಾನ್ ತಮ್ಮ ಟ್ವೀಟ್ನಲ್ಲಿ ಬರೆದಿದ್ದಾರೆ.
ಅಧಿಕಾರಿಯ ಟ್ವೀಟ್ ವೈರಲ್ ಆಗಿದೆ. ಟ್ವಿಟ್ಟರ್ ಬಳಕೆದಾರರು, ಪ್ರಕೃತಿ ಮತ್ತು ವನ್ಯಜೀವಿಗಳಿಗೆ ಹತ್ತಿರದಲ್ಲಿರುವ ಅಧಿಕಾರಿಯನ್ನು ಅದೃಷ್ಟವಂತರು ಎಂದು ಕರೆದಿದ್ದಾರೆ.