ಟ್ರಾಫಿಕ್ ಪೊಲೀಸರದ್ದು ನಿಜಕ್ಕೂ ಸವಾಲಿನ ಕೆಲಸ. ಬಿಸಿಲಿರಲಿ, ಮಳೆಯಿರಲಿ ದಿನವಿಡೀ ನಿಂತುಕೊಂಡೇ ವಾಹನಗಳನ್ನು ನಿಯಂತ್ರಿಸಬೇಕು. ಈ ಕಠಿಣ ಕೆಲಸವನ್ನೂ ಸಖತ್ ಎಂಜಾಯ್ ಮಾಡಿಕೊಂಡು ಮಾಡುವವರಿದ್ದಾರೆ. ಅಂಥದ್ದೇ ವಿಡಿಯೋ ಒಂದು ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ.
ಮನುಷ್ಯ ತನ್ನ ಕೆಲಸವನ್ನು ಎಷ್ಟು ಪ್ರೀತಿಸುತ್ತಾನೆ ಎಂಬುದಕ್ಕೆ ಸಾಕ್ಷಿ ಇದು. ಕಿರಿದಾದ ಟಿ-ಪಾಯಿಂಟ್‌ನ ಮಧ್ಯದಲ್ಲಿ ಟ್ರಾಫಿಕ್ ಪೋಲೀಸ್ ನಿಂತಿದ್ದಾನೆ. ಕಾರುಗಳನ್ನು ನಿಲ್ಲಿಸಿ ಪಾದಚಾರಿಗಳಿಗೆ ರಸ್ತೆ ದಾಟಲು ಅವಕಾಶ ಮಾಡಿಕೊಡುವುದೇ ಆತನ ಕಾಯಕ. ಈ ಕೆಲಸವನ್ನು ಆತ ನಿಭಾಯಿಸಿದ ರೀತಿ ಸಿಕ್ಕಾಪಟ್ಟೆ ತಮಾಷೆಯಾಗಿದೆ.
ನಾಟಕೀಯವಾಗಿ ಜಿಗಿಯುತ್ತ ಡಾನ್ಸ್ ಮಾಡುತ್ತ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಪೊಲೀಸ್, ನೆಟ್ಟಿಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದಾನೆ. ವಿಡಿಯೋ ಈಗಾಗ್ಲೇ ವೈರಲ್ ಆಗಿದ್ದು, 1.2 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಕೂಡ ಮಾಡಿದ್ದಾರೆ.
ಈ ಹಿಂದೆ ಉತ್ತರಾಖಂಡದ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಅಸಾಮಾನ್ಯ ರೀತಿಯಲ್ಲಿ ಟ್ರಾಫಿಕ್ ಅನ್ನು ನಿರ್ವಹಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಡೆಹ್ರಾಡೂನ್‌ನಲ್ಲಿ ಜೋಗೇಂದ್ರ ಕುಮಾರ್ ಎಂಬಾತ, ಸಿಟಿ ಹಾರ್ಟ್ ಹಾಸ್ಪಿಟಲ್‌ನ ಸುತ್ತಮುತ್ತಲಿನ ಟ್ರಾಫಿಕ್ ಅನ್ನು ನಿಯಂತ್ರಿಸುವ ವಿಶಿಷ್ಟ ವಿಧಾನ ಪ್ರಶಂಸೆಗೆ ಪಾತ್ರವಾಗಿತ್ತು. ಜೋಗೇಂದ್ರ ಕುಮಾರ್, ತಮ್ಮ ಅದ್ಭುತ ನೃತ್ಯದ ಮೂಲಕ ಟ್ರಾಫಿಕ್ ನಿಯಂತ್ರಣ ಮಾಡ್ತಾರೆ.
https://twitter.com/buitengebieden/status/1592616830484770817?ref_src=twsrc%5Etfw%7Ctwcamp%5Etweetembed%7Ctwterm%5E1592616830484770817%7Ctwgr%5E5bcda199872ced9a1ce6c147eb5ae3800affc629%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-traffic-cop-regulates-traffic-in-an-amusing-manner-video-goes-viral-6402703.html