
ಈ ಬಾರಿಯ ವಿವೋ ಪ್ರೊ ಕಬಡ್ಡಿಯ ಪಂದ್ಯಗಳು ರೋಚಕತೆಯಿಂದ ಸಾಗುತ್ತಿದ್ದು ಇಂದು ಮೂರು ಭರ್ಜರಿ ಪಂದ್ಯಗಳನ್ನು ನೋಡಲು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಮೊದಲನೇ ಪಂದ್ಯದಲ್ಲಿ ಪಾಯಿಂಟ್ ಟೇಬಲ್ ನಲ್ಲಿ ಎರಡನೇ ಸ್ಥಾನದಲ್ಲಿರುವ ಪುಣೇರಿ ಪಲ್ಟಾನ್ ಹಾಗೂ ಹರಿಯಾಣ ಸ್ಟಿಲರ್ಸ್ ಮುಖಾಮುಖಿಯಾದರೆ ಎರಡನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ತೆಲುಗು ಟೈಟನ್ಸ್ ಕಣಕ್ಕಿಳಿಯಲಿದ್ದಾರೆ ಇನ್ನೂ ಮೂರನೇ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಹಾಗೂ ಗುಜರಾತ್ ಜೆಂಟ್ಸ್ ಸೆಣಸಾಡಲಿವೆ.
ಬೆಂಗಳೂರು ಬುಲ್ಸ್ ಈ ಬಾರಿ ಬಲಿಷ್ಠ ತಂಡವಾಗಿದ್ದು ಮೊದಲನೇ ಸ್ಥಾನದಿಂದ ಕೆಳಗಿಳಿಯದಂತೆ ಕಾಪಾಡಿಕೊಳ್ಳುತ್ತಿದೆ. ವಿಕಾಸ್ ಖಂಡೋಲಾ ಒಬ್ಬರನ್ನು ಬಿಟ್ಟು ಎಲ್ಲಾ ಆಟಗಾರರು ಭರ್ಜರಿ ಫಾರ್ಮ್ ನಲ್ಲಿದ್ದು ಗೆಲುವಿನ ಓಟ ಮುಂದುವರಿಸುತ್ತಲೇ ಇದೆ. ಇನ್ನು ಸೋಲಿನ ಸುಳಿಯಲ್ಲಿ ಸಿಲುಕಿರುವ ತೆಲುಗು ಟೈಟನ್ಸ್ ಇದುವರೆಗೂ ಒಂದೇ ಪಂದ್ಯದಲ್ಲಿ ಜಯಭೇರಿಯಾಗಿದ್ದು ಇಂದಿನ ಪಂದ್ಯದಲ್ಲಾದರೂ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯ ಸಾಧಿಸುತ್ತಾ ಕಾದು ನೋಡಬೇಕಾಗಿದೆ.