ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ ಸಿ) ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಹಿರಿಯ ಆಡಳಿತಾಧಿಕಾರಿ, ಸಹಾಯಕ ಉದ್ಯೋಗ ಅಧಿಕಾರಿ, ಉಪ-ಪ್ರಾದೇಶಿಕ ಉದ್ಯೋಗ ಅಧಿಕಾರಿ ಮತ್ತು ಸಹಾಯಕ ಪ್ರಾಧ್ಯಾಪಕ (ಆಯುರ್ವೇದ) ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಮೂಲಕ ಸಂಸ್ಥೆಯಲ್ಲಿನ 14 ಹುದ್ದೆಗಳನ್ನು ಭರ್ತಿ ಮಾಡಲು ಆಯೋಗವು ಮುಂದಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು upsc.gov.in ನಲ್ಲಿ ಯುಪಿಎಸ್‍ಸಿ ಯ ಅಧಿಕೃತ ವೆಬ್‍ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 2022ರ ಫೆಬ್ರವರಿ 10 ಕೊನೆಯ ದಿನಾಂಕವಾಗಿದೆ.
ಹುದ್ದೆಯ ವಿವರಗಳು
ಹಿರಿಯ ಆಡಳಿತಾಧಿಕಾರಿ: 8 ಹುದ್ದೆಗಳು
ಸಹಾಯಕ ಉದ್ಯೋಗ ಅಧಿಕಾರಿ: 1 ಹುದ್ದೆ
ಉಪ-ಪ್ರಾದೇಶಿಕ ಉದ್ಯೋಗ ಅಧಿಕಾರಿ: 1 ಹುದ್ದೆ
ಸಹಾಯಕ ಪ್ರಾಧ್ಯಾಪಕ (ಆಯುರ್ವೇದ): 4 ಹುದ್ದೆಗಳು
ವಯಸ್ಸಿನ ಮಿತಿ
ಹಿರಿಯ ಆಡಳಿತಾಧಿಕಾರಿ: 35 ವರ್ಷಗಳು
ಸಹಾಯಕ ಉದ್ಯೋಗ ಅಧಿಕಾರಿ: 35 ವರ್ಷಗಳು
ಉಪ-ಪ್ರಾದೇಶಿಕ ಉದ್ಯೋಗ ಅಧಿಕಾರಿ: 30 ವರ್ಷಗಳು
ಸಹಾಯಕ ಪ್ರಾಧ್ಯಾಪಕ (ಆಯುರ್ವೇದ): 45-50 ವರ್ಷಗಳು
ಇನ್ನು ಆಸಕ್ತ ಅಭ್ಯರ್ಥಿಗಳು ರೂ. 25 ಅನ್ನು ಎಸ್‍ಬಿಐ ನ ಯಾವುದೇ ಶಾಖೆಯಲ್ಲಿ ಹಣವನ್ನು ನಗದು ಮೂಲಕ ಅಥವಾ ಎಸ್‍ಬಿಐ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿಕೊಂಡು ಅಥವಾ ವೀಸಾ/ಮಾಸ್ಟರ್ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಶುಲ್ಕ ಕಳುಹಿಸಬಹುದು. ಎಸ್ಸಿ/ಎಸ್ಟಿ/ವಿಶೇಷ ಚೇತನ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.