alex Certify ವಿವಾಹ ಸಂಗೀತ ಸಮಾರಂಭದಲ್ಲಿ ಮದುಮಗಳ ಬೊಂಬಾಟ್ ಸ್ಟೆಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹ ಸಂಗೀತ ಸಮಾರಂಭದಲ್ಲಿ ಮದುಮಗಳ ಬೊಂಬಾಟ್ ಸ್ಟೆಪ್ಸ್

The bride, unable to control her excitement, can be seen dancing in the video alone as she accepts greetings from the guests on stage. (Credits: Instagram)ಇತ್ತೀಚೆಗೆ ಭಾರತೀಯ ವಿವಾಹಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿವೆ. ಈ ಪಟ್ಟಿಗೆ ಇದೀಗ ಹೊಸದೊಂದು ವಿಡಿಯೋ ಸೇರ್ಪಡೆಯಾಗಿದೆ.

ಮದುವೆಯ ಸಂಗೀತ ಸಮಾರಂಭದಲ್ಲಿ ಮದುಮಗಳ ನೃತ್ಯ ಪ್ರದರ್ಶನದ ವಿಡಿಯೋ ಇದಾಗಿದೆ. ಇಂಡಿಯನ್ ಫೇಮಸ್ ಡ್ಯಾನ್ಸರ್ಸ್ ಎಂಬ ಇನ್‌ಸ್ಟಾಗ್ರಾಮ್ ಪುಟದಿಂದ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಮದುಮಗಳು ಅದ್ಭುತವಾಗಿ ಕುಣಿದು ಕುಪ್ಪಳಿಸಿದ್ದಾಳೆ.

ಸಾಂಪ್ರದಾಯಿಕ ಲೆಹೆಂಗಾಗಳಲ್ಲಿ ಸಂಗೀತ ಸಮಾರಂಭಕ್ಕಾಗಿ ಅಲಂಕೃತಗೊಂಡಿರುವ ಮದುಮಗಳು ಕಜ್ರಾ ಮೊಹಬ್ಬತ್ ವಾಲಾ ಹಾಡನ್ನು ಮರುಸೃಷ್ಟಿಸಿದ್ದಾರೆ. ಈ ಹಾಡಿಗೆ ಸಖತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ.

ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ ಕೇವಲ ಮೂರು ದಿನಗಳಲ್ಲಿ, ವಿಡಿಯೋ ಸುಮಾರು 1.7 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ವಧು ಹಾಗೂ ಕನ್ಯೆಯರ ಪ್ರದರ್ಶನದಿಂದ ವಿಸ್ಮಯಗೊಂಡ ಬಳಕೆದಾರರು ಕನ್ಯೆಯರ ನೃತ್ಯಕ್ಕೆ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...