ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಒಂದು ಮಹತ್ತರ ಘಟ್ಟ. ಇದು ಹುಡುಗ – ಹುಡುಗಿಯನ್ನು ಒಂದುಗೂಡಿಸುವುದರ ಜೊತೆಗೆ ಎರಡು ಕುಟುಂಬಗಳನ್ನೂ ಸಹ ಹತ್ತಿರವಾಗಿಸುತ್ತದೆ. ಅಲ್ಲದೆ ವಿವಾಹ ಸಮಾರಂಭಗಳು, ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರ ಸಮ್ಮಿಲನಕ್ಕೆ ಸಾಕ್ಷಿ ಆಗುತ್ತದೆ.
ಇದೀಗ ಮದುವೆ ಕುರಿತ ಸಮೀಕ್ಷೆಯೊಂದು ನಡೆದಿದ್ದು ಇದರಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಅರೇಂಜ್ಡ್ ಮ್ಯಾರೇಜ್ ಆಗುವವರ ಸಂಖ್ಯೆಯಲ್ಲಿ ಶೇಕಡಾ 24 ರಷ್ಟು ಇಳಿಕೆಯಾಗಿದ್ದರೆ, ಪ್ರೇಮ ವಿವಾಹವಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
2020ರಲ್ಲಿ ಶೇಕಡ 68 ರಷ್ಟು ಅರೇಂಜ್ಡ್ ಮ್ಯಾರೇಜ್ ನಡೆದಿದ್ದರೆ 2023ರ ಬಳಿಗೆ ಇದು ಶೇಕಡ 44 ತಲುಪಿದ್ದು, ಒಟ್ಟಾರೆ ಶೇಕಡ 24ರಷ್ಟು ಇಳಿಕೆಯಾಗಿದೆ ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಪ್ರೇಮ ವಿವಾಹಕ್ಕೆ ಸಾಮಾಜಿಕ ಜಾಲತಾಣಗಳು ಸಹ ಕಾರಣವಾಗುತ್ತಿದ್ದು, ಜೊತೆಗೆ ವಿವಾಹ ವೆಬ್ಸೈಟ್ ಮೂಲಕವೂ ಹುಡುಗ – ಹುಡುಗಿ ತಮಗಿಷ್ಟದವರನ್ನು ಆರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕುಟುಂಬಸ್ಥರು ನಿಶ್ಚಯಿಸುವ ಮದುವೆಯಲ್ಲಿ ಇಳಿಕೆಯಾಗಿದ್ದು ಪ್ರೇಮ ವಿವಾಹ ಹೆಚ್ಚಳ ಕಂಡಿದೆ.