alex Certify ವಿವಾಹಿತ ಪುರುಷರು ಈ ಕೆಟ್ಟ ಅಭ್ಯಾಸ ಬಿಡದೇ ಇದ್ದರೆ ಭಗ್ನವಾಗಬಹುದು ತಂದೆಯಾಗುವ ಕನಸು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹಿತ ಪುರುಷರು ಈ ಕೆಟ್ಟ ಅಭ್ಯಾಸ ಬಿಡದೇ ಇದ್ದರೆ ಭಗ್ನವಾಗಬಹುದು ತಂದೆಯಾಗುವ ಕನಸು…..! 

ಮದುವೆಯ ನಂತರ ಸಾಮಾನ್ಯವಾಗಿ ಪ್ರತಿಯೊಬ್ಬ ಪುರುಷನೂ ತಂದೆಯಾಗಬೇಕೆಂದು ಹಾತೊರೆಯುತ್ತಾನೆ. ಆದರೆ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಬಳಕೆಯೇ ಪುರುಷರ ಈ ಆಸೆಯನ್ನು ಭಗ್ನಗೊಳಿಸಬಹುದು. ಸ್ಮಾರ್ಟ್‌ಫೋನ್‌ ಈಗ ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿದೆ. ಮೊಬೈಲ್‌ನಿಂದ ಅರೆಕ್ಷಣವೂ ದೂರವಿರಲಾರದೇ ಜನರು ಚಡಪಡಿಸುತ್ತಾರೆ.

ಕೆಲವರಿಗಂತೂ ತಡರಾತ್ರಿಯವರೆಗೂ ಮೊಬೈಲ್‌ ನೋಡಿ ಅಭ್ಯಾಸ. ನೀವು ಕೂಡ ಈ ರೀತಿ ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ ಅನ್ನು ಅತಿಯಾಗಿ ಬಳಸುತ್ತಿದ್ರೆ ಕೂಡಲೇ ಇದನ್ನು ಬಿಟ್ಟುಬಿಡಿ. ವಾಸ್ತವವಾಗಿ ತಡರಾತ್ರಿವರೆಗೂ ಗ್ಯಾಜೆಟ್‌ಗಳನ್ನು ಬಳಸುವ ಅಭ್ಯಾಸದಿಂದಾಗಿ, ಪುರುಷರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಅಧ್ಯಯನದಲ್ಲೇ ಬಹಿರಂಗವಾಗಿದೆ.

ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಂದ ಹೊರಸೂಸುವ ನೀಲಿ ಬೆಳಕು ಪುರುಷರ ವೀರ್ಯಾಣು ಮತ್ತು ವೀರ್ಯದ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಪುರುಷ ಫಲವತ್ತತೆಗೂ ಮಾರಕವಾಗುತ್ತದೆ. ಸಂಶೋಧಕರು, 21 ರಿಂದ 59 ವರ್ಷ ವಯಸ್ಸಿನ 116 ಪುರುಷರಿಂದ ವೀರ್ಯ ಮಾದರಿಗಳನ್ನು ತೆಗೆದುಕೊಂಡು ಸಂಶೋಧನೆಗೆ ಒಳಪಡಿಸಿದ್ದಾರೆ.

ಇವರ ಹವ್ಯಾಸಗಳು ಜೀವನ ಶೈಲಿ ಎಲ್ಲವನ್ನೂ ಪರಿಗಣಿಸಲಾಗಿದೆ. ಅಧ್ಯಯನದ ವರದಿ ಪ್ರಕಾರ ಮೊಬೈಲ್‌ ಮತ್ತು ಲ್ಯಾಪ್ಟಾಪ್‌ ಅನ್ನು ತಡರಾತ್ರಿವರೆಗೂ ಬಳಕೆ ಮಾಡಿದ ಪುರುಷರ ವೀರ್ಯದ ಗುಣಮಟ್ಟ ಕಳಪೆಯಾಗಿದೆ. ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಸಾಧನಗಳು ಫಲವತ್ತತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬುದು ಇದರಿಂದ ಸಾಬೀತಾಗಿದೆ. ತಡರಾತ್ರಿಯವರೆಗೆ ಫೋನ್ ಅಥವಾ ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸುವ ಪುರುಷರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗುವ ಅಪಾಯವಿರುತ್ತದೆ.

ಸಮಯಕ್ಕೆ ಸರಿಯಾಗಿ ಮಲಗುವ ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಕಡಿಮೆ ಮಾಡುವ ಪುರುಷರ ವೀರ್ಯದ ಗುಣಮಟ್ಟ  ಉತ್ತಮವಾಗಿರುತ್ತದೆ. ಫೋನ್‌ನಿಂದ ಹೊರಸೂಸುವ ವಿಕಿರಣವು ಡಿಎನ್‌ಎಗೆ ಹಾನಿ ಮಾಡುತ್ತದೆ. ಜೀವಕೋಶಗಳು ಕ್ರಮೇಣ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ ಎಂಬುದು ಕೂಡ ಅಧ್ಯಯನದಿಂದ ತಿಳಿದು ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಭಾರತದಲ್ಲಿ ಶೇ.23ರಷ್ಟು ಪುರುಷರು ಬಂಜೆತನದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...