ವಿವಾಹ ಪೂರ್ವ ಲೈಂಗಿಕ ಸಂಪರ್ಕ ಹೊಂದುವವರಿಗೆ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸಲು ಇಂಡೋನೇಷ್ಯಾ ಸಿದ್ಧತೆ ನಡೆಸಿದೆ. ಮೂರು ವರ್ಷಗಳ ಹಿಂದೆಯೇ ಕಾನೂನು ಸಿದ್ದಗೊಂಡಿದ್ದು ಅದನ್ನು ಈಗ ಸಂಸತ್ತಿನಲ್ಲಿ ಅಂಗೀಕರಿಸಲಾಗುತ್ತಿದೆ.
ಹೊಸ ಕಾನೂನಿನ ಅನ್ವಯ ವಿವಾಹ ಪೂರ್ವ ಲೈಂಗಿಕ ಸಂಬಂಧ ಹೊಂದುವವರಿಗೆ ಹಾಗೂ ವಿವಾಹೇತರ ಸಂಬಂಧ ಹೊಂದಿದವರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈಗಾಗಲೇ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಈ ಕಾನೂನು ಜಾರಿಯಲ್ಲಿದ್ದು, ಈಗ ಇಂಡೋನೇಷ್ಯಾದಲ್ಲೂ ಸಹ ಅನುಷ್ಠಾನಗೊಳ್ಳುತ್ತಿದೆ.
ವಿವಾಹ ಪೂರ್ವ ಲೈಂಗಿಕ ಸಂಬಂಧ ಹೊಂದಿದವರ ಕುರಿತು ಪೋಷಕರು ದೂರು ನೀಡಬಹುದಾಗಿದ್ದು, ಹಾಗೆಯೇ ವಿವಾಹೇತರ ಸಂಬಂಧದ ಕುರಿತು ಅತಿ ಅಥವಾ ಪತ್ನಿ ವ್ಯಭಿಚಾರದ ಕುರಿತು ದೂರು ದಾಖಲಿಸಬಹುದಾಗಿದೆ. ಆರೋಪ ಸಾಬೀತಾದರೆ ಒಂದು ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.