ಭಾರತೀಯ ವಿವಾಹ ಸಮಾರಂಭದಲ್ಲಿ ಶಾಸ್ತ್ರ, ಸಂಪ್ರದಾಯ ಬಹಳ ಜೋರಾಗಿಯೇ ಇರುತ್ತದೆ. ಇದರ ಜೊತೆಗೆ ನೃತ್ಯ ಹಾಗೂ ಸಂಗೀತದ ಅಬ್ಬರ ಕೂಡ ಅಷ್ಟೇ ಜೋರಾಗಿ ಇರುತ್ತದೆ. ಅಂತಹ ಒಂದು ಡಾನ್ಸ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಇದೀಗ ವಧುವೊಬ್ಬಳು ತನ್ನ ಮದುವೆಯ ಅದ್ಭುತ ದಿನದಂದು ಬೊಂಬಾಟ್ ಆಗಿ ಕುಣಿದು ಕುಪ್ಪಳಿಸಿದ್ದಾಳೆ. ತನ್ನ ಸಂಗೀತ ಸಮಾರಂಭದಲ್ಲಿ ʼಕಭಿ ಖುಷಿ ಕಭಿ ಗಮ್ʼ ಚಿತ್ರದ ಬೋಲೆ ಚೂಡಿಯನ್ ಹಾಡಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾಳೆ.
ಆಕಾಂಕ್ಷಾ ಮಿಶ್ರಾ ಎಂದು ಗುರುತಿಸಲಾದ ವಧು ತನ್ನ ನೆಚ್ಚಿನ ಹಾಡಿಗೆ ನೃತ್ಯ ಮಾಡಿದ್ದಾಳೆ. ಸುಂದರವಾದ ಲೆಹೆಂಗಾ ಧರಿಸಿರುವ ವಧುವು ಅಪ್ಸರೆಯಂತೆ ಕಂಗೊಳಿಸುತ್ತಿದ್ದಾಳೆ. ಬೋಲೆ ಚೂಡಿಯನ್ ಹಾಡಿಗೆ ಬಹಳ ಉತ್ಸಾಹದಿಂದ ಕುಣಿದಿದ್ದಾಳೆ. ಈಕೆಯ ಅದ್ಭುತ ನೃತ್ಯ ನೋಡಿದ ಅತಿಥಿಗಳು ವಧುವನ್ನು ಮತ್ತಷ್ಟು ಹುರಿದುಂಬಿಸಿದ್ದಾರೆ.
ಈ ವಿಡಿಯೋವನ್ನು ದಿ ವೆಡ್ಡಿಂಗ್ ಮಿನಿಸ್ಟ್ರಿ ಎಂಬ ಇನ್ಸ್ಟಾಗ್ರಾಮ್ ಪುಟ ಹಂಚಿಕೊಂಡಿದೆ. ಈ ಹಾಡು ವಧು ಬಾಲ್ಯದಲ್ಲಿರುವಾಗ ಆಕೆಯ ನೆಚ್ಚಿನ ಹಾಡಾಗಿತ್ತಂತೆ. ಹೀಗಾಗಿ ತನ್ನ ಮದುವೆಯ ಸಂಗೀತ ಸಂಭ್ರಮದಲ್ಲಿ ವರನಿಗಾಗಿ ಈ ಹಾಡಿಗೆ ಡಾನ್ಸ್ ಮಾಡಿದ್ದಾಳೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಆಕೆಯ ಉತ್ಸಾಹಭರಿತ ನೃತ್ಯಕ್ಕೆ ಮನಸೋತಿದ್ದಾರೆ.