ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಪತಿ ಸೈಫ್ ಅಲಿ ಖಾನ್ ನಾಲ್ವರು ಮಕ್ಕಳನ್ನು ಪೋಷಿಸಿರುವ ಬಗೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸೈಫ್ ಅಲಿ ಖಾನ್ ತಮ್ಮ ಮೊದಲ ಮದುವೆ ಮೂಲಕ ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್ ಎಂಬ ಮಕ್ಕಳನ್ನು ಹೊಂದಿದ್ದಾರೆ. ಕರೀನಾ ಕಪೂರ್ ಜೊತೆಗಿನ ದಾಂಪತ್ಯದಿಂದ ತೈಮೂರ್ ಅಲಿ ಖಾನ್ ಹಾಗೂ ಜಹಾಂಗೀರ್ ಅಲಿ ಖಾನ್ ಎಂಬ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ. ಸೈಫ್ ಅಲಿ ಖಾನ್ ತಮ್ಮ ನಾಲ್ವರೂ ಮಕ್ಕಳಿಗೆ ಸೂಕ್ತ ಸಮಯ ನೀಡುತ್ತಾರೆ ಎಂದು ಕರೀನಾ ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಕರೀನಾ ಕಪೂರ್, ಸೈಫ್ ಪ್ರತಿಯೊಂದು ದಶಕದಲ್ಲಿಯೂ ಒಂದೊಂದು ಮಕ್ಕಳನ್ನು ಪಡೆದಿದ್ದಾರೆ. 20, 30, 40 ಹಾಗೂ 50ರ ವಯಸ್ಸಿನಲ್ಲಿ ಅವರು ತಂದೆಯಾಗಿದ್ದಾರೆ. ಆದರೆ ನಿಮ್ಮ 60ನೇ ವಯಸ್ಸಿನಲ್ಲಿ ಇದು ಸಾಧ್ಯವಿಲ್ಲ. ಸೈಫ್ ಅಲಿ ಖಾನ್ ಪ್ರತಿಯೊಂದು ಮಕ್ಕಳ ಪಾಲಿಗೂ ಉತ್ತಮ ತಂದೆ ಎನಿಸಿದ್ದಾರೆ.
ಸೈಫ್ ಹಾಗೂ ತೈಮೂರ್ ನಡುವಿನ ಬಾಂಡ್ ಬಗ್ಗೆಯೂ ಮಾತನಾಡಿದ ಕರೀನಾ, ತೈಮೂರ್ಗೆ ಜನರ ಜೊತೆ ಇರುವುದು ಅಂದರೆ ತುಂಬಾನೇ ಇಷ್ಟ. ಜನರು ಮನೆಯಲ್ಲಿ ಇದ್ದರೆ ಅವನು ಕೂಡ ಜನರ ಜೊತೆ ಇರಲು ಇಷ್ಟ ಪಡುತ್ತಾನೆ. ಅವನು ಒಂದು ರೀತಿ ಮಿನಿ ಸೈಫ್ ಇದ್ದಂತೆ. ಆತನಿಗೆ ರಾಕ್ಸ್ಟಾರ್ ಆಗಬೇಕೆಂಬ ಆಸೆ. ಇವರಿಬ್ಬರ ನಡುವಿನ ಬಾಂಡ್ ಧೃಡವಾಗಿದೆ. ತೈಮೂರ್ ಯಾವಾಗಲೂ ಅಪ್ಪ ನನ್ನ ಬೆಸ್ಟ್ ಫ್ರೆಂಡ್ ಎಂದು ಹೇಳುತ್ತಾನೆ ಎಂದು ಹೇಳಿದರು.