ವಿವಾದಿತ ಸ್ವಯಂ ಘೋಷಿತ ದೇವಮಾನವ, ಬಾಗೇಶ್ವರ್ ಬಾಬಾ ಎಂದೂ ಕರೆಯಲ್ಪಡುವ ಪಂಡಿತ್ ಧೀರೇಂದ್ರ ಶಾಸ್ತ್ರಿ ಗುಜರಾತ್‌ನಲ್ಲಿ “ದೈವಿಕ ದರ್ಬಾರ್” ನಡೆಸಲು ಸಜ್ಜಾಗಿದ್ದಾರೆ.
ಭದ್ರತೆಗಾಗಿ 500 ಬೌನ್ಸರ್‌ಗಳು ಮತ್ತು 2,000 ಸ್ವಯಂ ಸೇವಕರನ್ನ ನಿಯೋಜಿಸಲಾಗಿದೆ. ಕಾಂಗ್ರೆಸ್ ಪಕ್ಷವು ಅವರನ್ನು “ನಕಲಿ ಬಾಬಾ” ಎಂದು ಕರೆದಿದೆ.
ಎರಡು ದಿನಗಳ ದರ್ಬಾರ್ ಅಹಮದಾಬಾದ್‌ನಲ್ಲಿ ಮೇ 29 ಮತ್ತು 30 ರಂದು ನಡೆಯುತ್ತದೆ. ನಂತರ ರಾಜ್‌ಕೋಟ್‌ನ ರೇಸ್ ಕೋರ್ಸ್‌ನಲ್ಲಿ ಎರಡು ದಿನಗಳ ಅಧಿವೇಶನ ನಡೆಯಲಿದೆ.
ತನ್ನ ಅನುಯಾಯಿಗಳಿಂದ ಯೂತ್ ಐಕಾನ್ ಆಗಿ ಕಾಣುತ್ತಿರುವ ಬಾಗೇಶ್ವರ್ ಬಾಬಾ ಸೂರತ್‌ನಲ್ಲಿ ಕೂಡ ದರ್ಬಾರ್ ಮಾಡಲು ಯೋಜಿಸುತ್ತಿದ್ದಾರೆ.
ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ ಸಿನ್ಹ ವಘೇಲಾ ಅವರು ಧೀರೇಂದ್ರ ಶಾಸ್ತ್ರಿಯನ್ನು ಟೀಕಿಸಿದ್ದು, ಅವರನ್ನು “ಬಿಜೆಪಿಯ ಪ್ರಚಾರಕ” ಮತ್ತು ಧರ್ಮದ ಸೋಗಿನಲ್ಲಿ ರಾಜಕೀಯ ವಿಭಜನೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಬಾಗೇಶ್ವರ್ ಬಾಬಾ ಅವರ ಪವಾಡಗಳನ್ನು ಕೇಸರಿ ಬ್ರಿಗೇಡ್ ಪ್ರಚಾರ ಮಾಡುತ್ತಿದೆ ಎಂದು ವಘೇಲಾ ಹೇಳಿದ್ದಾರೆ.