ಕ್ರಿಕೆಟರ್‌ಗಳು, ಸೆಲೆಬ್ರಿಟಿಗಳು ಏನೇ ಮಾಡಿದ್ರೂ ಅದು ದೊಡ್ಡ ಸುದ್ದಿಯಾಗುತ್ತೆ. ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಾಚ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇಂದು ಬೆಳಗ್ಗೆ ಕೊಹ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಕೊಹ್ಲಿಗಾಗಿಯೇ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಕಾಯುತ್ತಿದ್ದ ಅಭಿಮಾನಿಗಳು ಚಪ್ಪಾಳೆ ತಟ್ಟಿ ಅವರನ್ನು ಸ್ವಾಗತಿಸಿದ್ದಾರೆ.
ಕೊಹ್ಲಿ ಕೂಡ ಅಭಿಮಾನಿಗಳಿಗೆ ಪ್ರತಿಕ್ರಿಯಿಸಿದ್ದಾರೆ. ಕಪ್ಪು ಟ್ರ್ಯಾಕ್ ಪ್ಯಾಂಟ್ ಹಾಗೂ ಸಡಿಲವಾದ ಟೀ ಶರ್ಟ್ ಧರಿಸಿ ಬಂದಿದ್ದ ಕೊಹ್ಲಿ ಕೈಯಲ್ಲಿ ಸುಂದರವಾದ ವಾಚ್ ಒಂದು ಹೊಳೆಯುತ್ತಿತ್ತು. ಕೈಯ್ಯಲ್ಲಿ ಹಿಡಿದಿದ್ದ ದುಬಾರಿ ಏರ್ ಪೋರ್ಟ್ ಪೌಚ್‌ನ ಬೆಲೆ ಕೂಡ 5 ಲಕ್ಷಕ್ಕೂ ಹೆಚ್ಚು.
ಆದ್ರೆ ಆ ವಾಚ್‌ನ ಬೆಲೆ ಕೇಳಿದ್ರೆ ಎಂಥವರು ಕೂಡ ದಂಗಾಗೋದು ಗ್ಯಾರಂಟಿ. ಈ ವಾಚ್ ಎಷ್ಟು ದುಬಾರಿ ಅಂದ್ರೆ ಅದೇ ಹಣದಲ್ಲಿ ಆಡಿ ಕಾರನ್ನೂ ಕೊಳ್ಳಬಹುದು. ಇದರ ಬೆಲೆ ಸುಮಾರು 57 ಲಕ್ಷ ರೂಪಾಯಿ ಅಂತಾ ಅಂದಾಜಿಸಲಾಗ್ತಿದೆ. ಪಾಟೆಕ್ ಫಿಲಿಪ್ ನಾಟಿಲಸ್ ವಾಚ್ ಕೊಹ್ಲಿಯ ಕೈಯ್ಯಲ್ಲಿ ತುಂಬಾ ಕ್ಲಾಸಿಯಾಗಿ ಕಾಣುತ್ತಿದೆ.
ಕೊಹ್ಲಿ ವಿಶ್ವಕಪ್‌ಗೂ ಮೊದಲು ಫಾರ್ಮ್‌ನಲ್ಲಿರಲಿಲ್ಲ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಉತ್ತಮ ಇನ್ನಿಂಗ್ಸ್ ಆಡಿ ತಂಡವನ್ನು ಗೆಲ್ಲಿಸಿದ್ರು. ಸೆಮಿಫೈನಲ್‌ನಲ್ಲಿ ಸೋತು ಟೀಂ ಇಂಡಿಯಾ ಬರಿಗೈಯ್ಯಲ್ಲಿ ಬಂದರೂ ಕೊಹ್ಲಿ ಮಾತ್ರ ಫಾರ್ಮ್‌ಗೆ ಮರಳಿದ್ದು, ಟೂರ್ನಿಯಲ್ಲಿ 98.66ರ ಸರಾಸರಿಯಲ್ಲಿ 296 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳು ಸೇರಿವೆ.