alex Certify ವಿರಾಟ್​ ಕೊಹ್ಲಿ- ಭಾರತದ ರಾಷ್ಟ್ರಧ್ವಜ ಸಮ್ಮಿಲನ: ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರಾಟ್​ ಕೊಹ್ಲಿ- ಭಾರತದ ರಾಷ್ಟ್ರಧ್ವಜ ಸಮ್ಮಿಲನ: ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ

ಕಳೆದ ಜನವರಿ ತಿಂಗಳಿನಲ್ಲಿ ನಡೆದ ಕ್ರಿಕೆಟ್​ ಪಂದ್ಯದಲ್ಲಿ ರಾಷ್ಟ್ರಗೀತೆ ಹಾಡುವಾಗ ಚ್ಯೂಯಿಂಗ್​ ಗಮ್​ ತಿನ್ನುತ್ತಾ ಭಾರಿ ವಿವಾದಕ್ಕೆ ಗುರಿಯಾಗಿದ್ದ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಇದೀಗ ಅದ್ಭುತ ಚಿತ್ರದೊಂದಿಗೆ ಶ್ಲಾಘನೆಗೆ ಒಳಗಾಗಿದ್ದಾರೆ.

ಭಾನುವಾರ ನಡೆದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಕ್ರ್ಯಾಕಿಂಗ್ ಸ್ಪರ್ಧೆಯಲ್ಲಿ ಏಕಾಂಗಿ ಹೋರಾಟಗಾರರಾಗಿದ್ದ ವಿರಾಟ್ ಕೊಹ್ಲಿ, ಭಾರತದ ರಾಷ್ಟ್ರಗೀತೆ ಹಾಡುವಾಗ ತನ್ಮಯರಾಗಿದ್ದು, ಅದರ ಫೋಟೋ ಇದಾಗಿದೆ.

ಅಸಲಿಗೆ ಕೊಹ್ಲಿ ಅವರು ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಇವರ ಫೋಟೋ ತೆಗೆಯುತ್ತಿದ್ದರು. ಅದೇ ಸಮಯದಲ್ಲಿ ಪಕ್ಕದಲ್ಲಿಯೇ ಇರುವ ರಾಷ್ಟ್ರಧ್ವಜದ ಫೋಟೋ ಕೂಡ ಸೆರೆಯಾಗಿದೆ. ಎರಡೂ ಫೋಟೋಗಳು ಒಟ್ಟಿಗೇ ಸಮ್ಮಿಲನಗೊಂಡಿದ್ದು, ತುಂಬಾ ಅದ್ಭುತ ಸಂಯೋಜನೆಯಂತೆ ತೋರುತ್ತಿದೆ. ಇದರ ಫೋಟೋ ಇದೀಗ ವೈರಲ್ ಆಗಿದೆ.

ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ಈ ಫೋಟೋ ಸೆರೆಹಿಡಿಯಲಾಗಿದ್ದು, ನೆಟ್ಟಿಗರಿಂದ ಫೋಟೋಗೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.

— Johns. (@CricCrazyJohns) October 30, 2022

https://twitter.com/pwakistani/status/1586553634090881024?ref_src=twsrc%5Etfw%7Ctwcamp%5Etweetembed%7Ctwterm%5E1586553634090881024%7Ctwgr%5E3172b533b2b32ab32b95b1d28bc5ccdb4829d435%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fvirat-kohli-india-flag-photo-viral-national-anthem-south-africa-t20-world-cup-twitter-reactions-6271495.html

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...