ವಿಮಾನದಲ್ಲಿ ಪ್ರಯಾಣಿಕರಿಗಾಗಿ ಎಕಾನಮಿ ಕ್ಲಾಸ್ ಮತ್ತು ಬಿಸಿನೆಸ್ ಕ್ಲಾಸ್ ಎಂಬ ಎರಡು ವಿಭಾಗಗಳಿವೆ ಅನ್ನೋದು ನಮಗೆಲ್ಲಾ ಗೊತ್ತಿದೆ. ಎಕಾನಮಿ ಕ್ಲಾಸ್‌ಗೆ ಹೋಲಿಸಿದರೆ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಟಿಕೆಟ್‌ಗಳು ತುಂಬಾ ದುಬಾರಿ. ಆದರೆ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಆ ಮೊತ್ತಕ್ಕೆ ತಕ್ಕಂತೆ ಇರುವ ಅನೇಕ ಪ್ರಚಂಡ ಸೌಲಭ್ಯಗಳಿವೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ವಿಮಾನಗಳಲ್ಲಿ ಪ್ರಯಾಣಿಸುವ ಹೆಚ್ಚಿನ ಸಂಖ್ಯೆಯ ಜನರು ಮಧ್ಯಮ ವರ್ಗದಿಂದ ಬರುತ್ತಾರೆ. ಇದರಿಂದಾಗಿ ಅವರು ದುಬಾರಿ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ.
ಆದರೆ ಎಕಾನಮಿ ಕ್ಲಾಸ್‌ನಲ್ಲಿ ಸಿಗದ ಹಲವು ಸೌಲಭ್ಯಗಳು ಬ್ಯುಸಿನೆಸ್ ಕ್ಲಾಸ್‌ನಲ್ಲಿವೆ. ಎಕಾನಮಿ ಮತ್ತು ಬ್ಯುಸಿನೆಸ್ ಕ್ಲಾಸ್ ನಡುವಿನ ದೊಡ್ಡ ವ್ಯತ್ಯಾಸವೆಂದರೆ ಆಸನ. ಎಕಾನಮಿ ಕ್ಲಾಸ್‌ನಲ್ಲಿ ಸಾಮಾನ್ಯ ಸೀಟುಗಳಿರುತ್ತವೆ. ಆದರೆ ಬ್ಯುಸಿನೆಸ್ ಕ್ಲಾಸ್ ವಿಶಾಲವಾದ ಮತ್ತು ರಿಕ್ಲೈನರ್ ಆಸನಗಳನ್ನು ಹೊಂದಿದೆ. ಇದರಿಂದಾಗಿ ಪ್ರಯಾಣದಲ್ಲಿ ಆಯಾಸವಾಗುವುದಿಲ್ಲ. ಆಸನವು ತುಂಬಾ ಐಷಾರಾಮಿ ಮತ್ತು ಆರಾಮದಾಯಕವಾಗಿದ್ದು, ನೀವು ಅದಕ್ಕೆ ಒರಗಿಕೊಂಡು ಮಲಗಬಹುದು.
ಬ್ಯುಸಿನೆಸ್ ಕ್ಲಾಸ್‌ನಲ್ಲಿ ಅಪಾರ ಸೌಲಭ್ಯಗಳಿವೆ. ಪ್ರಯಾಣಿಕರಿಗೆ ಮನರಂಜನೆಗಾಗಿ ಸೀಟಿನ ಮುಂಭಾಗದಲ್ಲಿ ಸ್ಕ್ರೀನ್ ನೀಡಲಾಗಿದ್ದು, ಅದರಲ್ಲಿ ತಮಗಿಷ್ಟ ಬಂದ ವಿಡಿಯೋಗಳನ್ನು ವೀಕ್ಷಿಸಬಹುದು. ಪ್ರಯಾಣಿಕರಿಗೆ ಹೆಡ್‌ಫೋನ್, ಮ್ಯಾಗಜೀನ್ ಮತ್ತು ದಿಂಬು ನೀಡಲಾಗುತ್ತದೆ. ಕಾಲಕಾಲಕ್ಕೆ ಆಹಾರ ಮತ್ತು ನೀರನ್ನು ಸರಬರಾಜು ಮಾಡಲಾಗುತ್ತದೆ. ಇದಲ್ಲದೆ ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕರಿಗೆ ಚೆಕ್-ಇನ್, ಪ್ರಯಾಣ ಮುಗಿದ ನಂತರ ವಿಮಾನದಿಂದ ಇಳಿಯುವುದು ಮತ್ತು ಲಗೇಜ್ ಸಂಗ್ರಹಣೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.