alex Certify ವಿಮಾನದ ಎಕಾನಮಿ ಸೀಟಿನಲ್ಲಿ ಕುಳಿತುಕೊಳ್ಳಲು ವ್ಯಕ್ತಿಯ ಪರದಾಟ..! ಅಷ್ಟಕ್ಕೂ ಅಲ್ಲಾಗಿದ್ದೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದ ಎಕಾನಮಿ ಸೀಟಿನಲ್ಲಿ ಕುಳಿತುಕೊಳ್ಳಲು ವ್ಯಕ್ತಿಯ ಪರದಾಟ..! ಅಷ್ಟಕ್ಕೂ ಅಲ್ಲಾಗಿದ್ದೇನು ಗೊತ್ತಾ..?

ವಿಮಾನದ ಎಕಾನಮಿ ಸೀಟಿನಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದ ಕಾರಣ ವ್ಯಕ್ತಿಯೊಬ್ಬನನ್ನು ಪ್ರಥಮ ದರ್ಜೆಗೆ ಅಪ್‌ಗ್ರೇಡ್ ಮಾಡಲಾಗಿದೆ. ಆತನ ಎತ್ತರದ ಸಮಸ್ಯೆ ಈ ಘಟನೆಗೆ ಕಾರಣವಾಗಿದೆ. ಉತ್ತರ ಕೆರೊಲಿನಾದಿಂದ ಜಾರ್ಜಿಯಾಕ್ಕೆ ಹೊರಟಿದ್ದ ವಿಮಾನದಲ್ಲಿ ಈ ವಿಲಕ್ಷಣ ಪ್ರಕರಣ ನಡೆದಿದೆ.

7 ಅಡಿ 1 ಇಂಚು ಎತ್ತರದ ಬ್ಯೂ ಬ್ರೌನ್,  ತನ್ನ ಕಾಲುಗಳನ್ನು ಹಿಗ್ಗಿಸಲು ಹೆಚ್ಚಿನ ಸ್ಥಳಾವಕಾಶವನ್ನು ಹೊಂದಲು ಸ್ವತಃ ಆಸನವನ್ನು ಕಾಯ್ದಿರಿಸಿದ್ದರು.

ಆದರೆ, ಅವರು ವಿಮಾನವನ್ನು ಹತ್ತಿದ ಬಳಿಕ ತಮ್ಮ ಸೀಟಿನಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ಒದ್ದಾಡಿದ್ದಾರೆ. ಕೂಡಲೇ ಫ್ಲೈಟ್ ಅಟೆಂಡೆಂಟ್‌ಗೆ ಕರೆ ಮಾಡಿದ ಬ್ಯೂ ಬ್ರೌನ್, ಬೇರೆ ವಿಮಾನಕ್ಕೆ ಸ್ಥಳಾಂತರಿಸುವಂತೆ ಕೇಳಿಕೊಂಡಿದ್ದಾರೆ. ಹೀಗಾಗಿ ಆರಾಮದಾಯಕವಾಗಿ ಪ್ರಯಾಣಿಸಲು ಅವರನ್ನು ಪ್ರಥಮ ದರ್ಜೆಗೆ ಅಪ್‌ಗ್ರೇಡ್ ಮಾಡಲಾಯಿತು.

ಟಿಕ್ ಟಾಕ್ ನಲ್ಲಿ ತನಗಾದ ಅನುಭವವನ್ನು ವಿವರಿಸಿದ ಬ್ರೌನ್, ಪ್ರಯಾಣವು ತನಗೆ ಯಾವಾಗಲೂ ದೊಡ್ಡ ಹೋರಾಟವಾಗಿದೆ ಎಂದು ತಿಳಿಸಿದ್ದಾರೆ. ನಿರ್ಗಮನ ಸಾಲಿನ ಆಸನವನ್ನು ಬುಕ್ ಮಾಡಿದ್ದಾಗಿ ತಿಳಿಸಿದ ಬ್ರೌನ್, ಯಾಕಾಗಿ ಅದೇ ಆಸನವನ್ನು ಕಾಯ್ದಿರಿಸಿದ್ದರ ಬಗ್ಗೆ ವಿವರಿಸಿದ್ದಾರೆ. ನಿರ್ಗಮನ ಸಾಲಿನ ಆಸನದಲ್ಲಿ ಸಾಕಷ್ಟು ಸ್ಥಳವಕಾಶ ಇರುತ್ತದೆ. ಆದರೆ, ತನ್ನ ಎತ್ತರದ ಸಮಸ್ಯೆಯಿಂದಾಗಿ ಆ ಆಸನದಲ್ಲಿ ಸರಿಯಾಗಿ ಕುಳಿತುಕೊಳ್ಳಲಾಗದೆ ನರಳಾಡುವಂತಾಯಿತು ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...