ವಿಮಾನದಲ್ಲಿ ಗರ್ಭಿಣಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದರಿಂದ ಆ ಮಗುವಿಗೆ ಸ್ಕೈ ಎಂದು ನಾಮಕರಣ ಮಾಡಲಾಗಿದೆ.
ಫ್ಲೋರಿಡಾಕ್ಕೆ ಹೋಗುತ್ತಿದ್ದ ಫ್ರಾಂಟಿಯರ್ ಏರ್‌ಲೈನ್ಸ್ ವಿಮಾನದ ಶೌಚಾಲಯದಲ್ಲಿ ಮಹಿಳೆಯೊಬ್ಬರು ಆರೋಗ್ಯಕರ ಮಗುವಿಗೆ ಜನ್ಮ ನೀಡಿದ್ದಾರೆ.
ಡೆನ್ವರ್‌ನಿಂದ ಒರ್ಲ್ಯಾಂಡೊಗೆ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ವಿಮಾನ ಸಿಬ್ಬಂದಿ ಗರ್ಭಿಣಿಯನ್ನು ಶೌಚಾಲಯಕ್ಕೆ ಕರೆದೊಯ್ದು ಹೆರಿಗೆಗೆ ಸಹಾಯ ಮಾಡಿದ್ದಾರೆ.
ಪೆನ್ಸಕೋಲಾ ವಿಮಾನ ನಿಲ್ದಾಣದಲ್ಲಿ ಅರೆವೈದ್ಯರನ್ನು ಸಿದ್ಧಪಡಿಸುವ ಮೂಲಕ ಡಿಸ್ಪ್ಯಾಚ್ ಉತ್ತಮ ಕೆಲಸ ಮಾಡಿದೆ. ವಿಮಾನದಲ್ಲಿ ನವಜಾತ ಶಿಶುವನ್ನು ಯಶಸ್ವಿಯಾಗಿ ಹೆರಿಗೆ ಮಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದಾರೆ. ಮಹಿಳೆ ಆರೋಗ್ಯಕರ ಮಗುವಿಗೆ ಜನ್ಮ ನೀಡಿದ್ದಾರೆ. ಈ ನೆನಪಿಗಾಗಿ ಅವರು ತನ್ನ ಮಗುವಿಗೆ ʼಸ್ಕೈʼ ಎಂದು ಹೆಸರಿಟ್ಟಿದ್ದಾರೆ.
ಇದನ್ನು ಫ್ರಾಂಟಿಯರ್ ಏರ್‌ಲೈನ್ಸ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು ಸಾವಿರಾರು ಲೈಕ್ಸ್ ಗಳು ಮತ್ತು ಕಾಮೆಂಟ್ ಗಳನ್ನು ಸ್ವೀಕರಿಸಿದೆ. ಬಳಕೆದಾರರು ಏರ್‌ಲೈನ್‌ನ ಟೀಮ್‌ವರ್ಕ್ ಅನ್ನು ಶ್ಲಾಘಿಸಿದ್ದಾರೆ. ಹಾಗೂ ಮಹಿಳೆ ಮತ್ತು ನವಜಾತ ಶಿಶುವನ್ನು ಅಭಿನಂದಿಸಿದ್ದಾರೆ.