
ಅನೇಕರಿಗೆ ಬಲು ಬೇಗನೇ ಶ್ರೀಮಂತರಾಗಬೇಕೆಂಬ ಹಂಬಲವೂ ಹೆಚ್ಚು. ಈ ವೇಳೆ ಪ್ರಮುಖವಾಗಿ ಕಣ್ಣಿಗೆ ಕಾಣುವುದು ಶೇರು ಮಾರುಕಟ್ಟೆ. ಅತಿ ಸಣ್ಣ ವ್ಯವಹಾರದಿಂದ ಹಿಡಿದು, ಕೋಟಿಗಟ್ಟಲೆಯ ವಹಿವಾಟುಗಳೆಲ್ಲವೂ ಇಂದು ಸ್ಮಾರ್ಟ್‌ಫೋನ್‌ನಲ್ಲೇ ಮುಗಿದು ಬಿಡುತ್ತದೆ. ಅಂತೆಯೇ ಶೇರು ಮಾರುಕಟ್ಟೆಯಲ್ಲಿನ ಹೂಡಿಕೆ, ಅದಕ್ಕೆ ಅಗತ್ಯವಾದ ದಾಖಲೆ ಇತ್ಯಾದಿಗಳು ಕ್ಷಣಾರ್ಧದಲ್ಲಿ ಫೋನ್ ಮೂಲಕ ಖಾತೆ ತೆರೆಯಲು ಸಾಧ್ಯವಿದೆ.
ಆದರೆ ನಮ್ಮಲ್ಲೇ ಬಹಳಷ್ಟು ಮಂದಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟ ಮಾಡಿಕೊಂಡವರನ್ನೂ ಕಾಣಬಹುದು. ಇದಕ್ಕೆ ಪ್ರಮುಖ ಕಾರಣ ಶೇರು ಮಾರುಕಟ್ಟೆಯ ಕುರಿತ ಅಜ್ಞಾನ.
ಯಾವ ಸಮಯದಲ್ಲಿ ಯಾವ ಸಂಸ್ಥೆಯ ಶೇರುಗಳನ್ನು ಖರೀದಿಸಬೇಕು ಹಾಗೂ ಅದನ್ನು ಯಾವಾಗ ಮಾರಾಟ ಮಾಡಬೇಕೆಂಬ ಜ್ಞಾನದ ಕೊರತೆಯಿಂದ ಅನೇಕ ಮಂದಿ ಹೂಡಿಕೆ ಮಾಡಿದ ಹಣವನ್ನು ಕಳೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ, ಒಂದು ಸಂಸ್ಥೆಯ ಶೇರು ಮುಂದಿನ ದಿನದಲ್ಲಿ ಲಾಭ ತಂದುಕೊಡಬಲ್ಲದೇ ಎಂಬುದನ್ನು ಅಧ್ಯಯನ ನಡೆಸದೇ ಖರೀದಿಸಿ, ನಷ್ಟ ಮಾಡಿಕೊಳ್ಳುತ್ತಾರೆ.
ಶೇರು ಸೂಚ್ಯಂಕ, ಮಾರುಕಟ್ಟೆಯ ಅಂದಾಜು ಬೆಲೆಗಳ ಏರಿಳಿತಗಳನ್ನು ಶೇ.95 ರಷ್ಟು ನಿಖರತೆಯಲ್ಲಿ ನೀವೂ ಅಂದಾಜಿಸಲು ಸಾಧ್ಯವಿದೆ. ಟೆಕ್ನಿಕಲ್ ಟ್ರೇಡಿಂಗ್ ನಿಂದ ಈ ಅಂಶಗಳನ್ನು ನಿಖರವಾಗಿ ಅಂದಾಜಿಸಲು ಸಾಧ್ಯ. MACD, RSI, EMA ಇತ್ಯಾದಿ ಅನೇಕ ವಿಧವಾದ ಟೆಕ್ನಿಕಲ್ ಇಂಡಿಕೇಟರ್‌ಗಳ ಬಳಕೆಗಳ ಮೂಲಕ ಟ್ರೇಡಿಂಗ್ ಮಾಡಿದಲ್ಲಿ ಮಾತ್ರ ಶೇರು ಹೂಡಿಕೆ ಲಾಭದಾಯಕವಾಗುತ್ತದೆ. ಶೇರು ಮಾರುಕಟ್ಟೆಯ ಸಂಪೂರ್ಣ ತಾಂತ್ರಿಕತೆ, ವಿವಿಧ ಬಗೆಯ ಚಾರ್ಟ್‌ಗಳ ವಿಶ್ಲೇಷಣೆ ಮಾಡುವ ವಿಧಾನಗಳನ್ನು ಅರಿಯಬಹುದು. ಪುತ್ತೂರಿನ ವಿಭಾ ಟೆಕ್ನಾಲಜೀಸ್ ಶೇರು ಮಾರುಕಟ್ಟೆಯ ತಾಂತ್ರಿಕ ವಿಚಾರಗಳ ಕುರಿತು 2 ದಿನಗಳ ಆನ್‌ಲೈನ್ ಕಾರ್ಯಾಗಾರ ಆಯೋಜಿಸಿದೆ. ತರಬೇತಿಗೆ ನೋಂದಾವಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕಾರ್ಯಾಗಾರದಲ್ಲಿ ನೀವೇನು ಕಲಿಯುತ್ತೀರಿ ?
ಶೇರು ಮಾರುಕಟ್ಟೆಯ ವಿಸ್ತಾರ ಚಿತ್ರಣ
ಶೇರು ಮಾರುಕಟ್ಟೆಯ ಸರಿ ಮತ್ತು ತಪ್ಪು ನಿರ್ಧಾರಗಳ ಕುರಿತು
ವಿವಿಧ ಬಗೆಯ ಟೆಕ್ನಿಕಲ್ ಚಾರ್ಟ್ಸ್ ವಿಶ್ಲೇಷಣೆ ಮಾಡುವ ಕ್ರಮಗಳು
ಹೂಡಿಕೆ/ಮಾರಾಟ ಸೂಚನೆ (ಸಿಗ್ನಲ್ಸ್)ಗಳನ್ನು ಗ್ರಹಿಸುವ ವಿಧಾನ
ಲೈವ್ ಟ್ರೇಡಿಂಗ್ – ಪ್ರಾಯೋಗಿಕ ಅಧ್ಯಯನ
ತರಬೇತಿಯ ಕುರಿತು :
ವಿಭಾ ಟೆಕ್ನಾಲಜೀಸ್‌ನ ಪ್ರಮೇಯ – ಅ ನಾಲೆಡ್ಜ್ ಶೇರಿಂಗ್ ಇನಿಷಿಯೇಟಿವ್ ಅನೇಕ ಬಗೆಯ ಆನ್‌ಲೈನ್ ಹಾಗೂ ಆಫ್‌ಲೈನ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅದರಲ್ಲಿ ಪ್ರಮುಖವಾಗಿ ಟ್ರೇಡಿಂಗ್ ಸೀಕ್ರೆಟ್ಸ್ 101 ಹಾಗೂ ಕ್ರಿಪ್ಟೋ 101 ವೆಬಿನಾರ್ ಆಯೋಜಿಸಿದ್ದಾರೆ. ಯುಕೆ ಟ್ರೇಡರ್ಸ್ ವಿಶ್ವವಿದ್ಯಾಲಯದಿಂದ ಫಾರೆಕ್ಸ್ ಹಾಗೂ ಈಕ್ವಿಟಿ ವಿಭಾಗದಲ್ಲಿ ಸರ್ಟಿಫೈಡ್ ಟ್ರೇಡರ್ ಹಾಗೂ ವಿಭಾ ಟೆಕ್ನಾಲಜೀಸ್ ನ ಮಾರ್ಗದರ್ಶಕರಾದ ಕೇಶವ ಮೂರ್ತಿ ಚಂದ್ರಶೇಖರ್ 2 ದಿನದ ಕಾರ್ಯಾಗಾರವನ್ನು ನಡೆಸಲಿದ್ದಾರೆ.