ಈಗ ಭಾರತದಲ್ಲಿ ಎಲ್ಲಿ ನೋಡಿದ್ರೂ ಸೆಖೆಯೋ ಸೆಖೆ, ಹೊರಗೆ ಕಾಲಿಡಲಾಗದಷ್ಟು ಬಿರು ಬಿಸಿಲು. ಹಾಗಾಗಿ ಹೆಚ್ಚಿನ ಜನರು ಮನೆಯಲ್ಲೇ ಇರಲು ಬಯಸ್ತಾರೆ. ಆದ್ರೆ ಸೆಖೆ ಜಾಸ್ತಿ ಇರೋದ್ರಿಂದ ಮನೆಯಲ್ಲಿ ಕೂಡ ವಿಶ್ರಾಂತಿ ಪಡೆಯೋದು ಅಸಾಧ್ಯ ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕೆಲವೊಂದು ಸರಳ ತಂತ್ರಗಳನ್ನು ಅಳವಡಿಸಿಕೊಂಡು ನಿಮ್ಮ ಮನೆಯನ್ನು ತಂಪಾಗಿಸಿಕೊಳ್ಳಲು ಪ್ರಯತ್ನಿಸಿ. ವಿಶೇಷವೆಂದರೆ ಈ ಟ್ರಿಕ್ಸ್ ಬಜೆಟ್ ಫ್ರೆಂಡ್ಲಿ. ಇವುಗಳಿಗಾಗಿ ನೀವು ಹೆಚ್ಚು ಖರ್ಚು ಮಾಡಬೇಕಾಗಿಲ್ಲ.
ಬೇಸಿಗೆ ಕಾಲದಲ್ಲಿ ಡೆಸರ್ಟ್ ಕೂಲರ್ ಬಳಸಿ. ಎಸಿಗೆ ಹೋಲಿಸಿದರೆ ಇದು ಕೇವಲ 10 ಪ್ರತಿಶತದಷ್ಟು ವಿದ್ಯುತ್ ಬಳಸಿಕೊಂಡು ನಿಮ್ಮ ಕೋಣೆಯನ್ನು ತಂಪಾಗಿರಿಸುತ್ತದೆ. ಮನೆಯಲ್ಲೊಂದು ಡೆಸರ್ಟ್ ಕೂಲರ್ ತಂದಿಟ್ಟುಕೊಂಡ್ರೆ ಕಡಿಮೆ ಖರ್ಚಿನಲ್ಲೇ ಸೆಖೆಯಿಂದ ಪರಿಹಾರ ಕಂಡುಕೊಳ್ಳಬಹುದು.
ಸೆಖೆಯಿಂದ ಪಾರಾಗಲು ನಿಮ್ಮ ಮನೆಯ ಪರದೆಗಳನ್ನು ಒದ್ದೆ ಮಾಡಿ. ಈ ತಂತ್ರವನ್ನು ಪ್ರಾಚೀನ ಈಜಿಪ್ಟ್‌ನಲ್ಲಿ ಬಳಸಲಾಗುತ್ತಿತ್ತು. ಪರದೆಗಳು ಒದ್ದೆಯಾದಾಗ, ಸೂರ್ಯನ ಶಾಖವು ಕಡಿಮೆ ಪ್ರಮಾಣದಲ್ಲಿ ಮನೆಯೊಳಗೆ ಬರುತ್ತದೆ. ಇದು ನಿಮ್ಮ ಮನೆಯನ್ನು ತಂಪಾಗಿರಿಸುತ್ತದೆ.
ಮನೆಯನ್ನು ತಂಪಾಗಿಡಲು ನೀವು ಮಿಸ್ಟಿಂಗ್ ಫ್ಯಾನ್ ಬಳಸಬಹುದು. ಇದರಲ್ಲಿ ನೀರು ಮಿಶ್ರಿತ ಗಾಳಿ ಬರುವುದರಿಂದ ಸುತ್ತಲಿನ ಶಾಖವನ್ನು ಹೀರಿಕೊಳ್ಳುತ್ತದೆ. ಆವಿಯಾದಾಗ ಗಾಳಿಯನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಇದಕ್ಕೆ ಜಾಸ್ತಿ ಕರೆಂಟ್ ಕೂಡ ಬೇಕಾಗಿಲ್ಲ.
ಇಡೀ ದಿನ ಸೀಲಿಂಗ್ ಫ್ಯಾನ್ ಉರಿಯುತ್ತಲೇ ಇದ್ದರೂ ತಂಪಾದ ಗಾಳಿ ಬೀಸುವುದಿಲ್ಲ. ಹಾಗಾಗಿ ನೀವು ಸ್ವಲ್ಪ ಹೊತ್ತು ಎಸಿ ಆನ್ ಮಾಡಿ. ನಂತರ ಎಸಿ ಆಫ್ ಮಾಡಿ, ಸೀಲಿಂಗ್ ಫ್ಯಾನ್ ಹಾಕಿ. ಆಗ ಸೀಲಿಂಗ್ ಫ್ಯಾನ್‌ನಿಂದ ತಣ್ಣನೆಯ ಗಾಳಿ ಬರುತ್ತದೆ. ಹೆಚ್ಚು ಹೊತ್ತು ಎಸಿ ಹಾಕಿಕೊಂಡಿದ್ದರೆ ಹೆಚ್ಚು ವಿದ್ಯುತ್ ಖರ್ಚಾಗುತ್ತದೆ.
ಕೆಲವರು ಈಗಲೂ ಹಳೆಯ ಇನ್‌ಕ್ಯಾಂಡಿಸೆಂಟ್ ಬಲ್ಬ್ ಅನ್ನು ಬಳಸುತ್ತಾರೆ. ಅಂತಹ ಬಲ್ಬ್‌ಗಳು ಕೋಣೆಯ ಉಷ್ಣತೆಯನ್ನು ಹೆಚ್ಚಿಸುತ್ತವೆ. ಹಾಗಾಗಿ ಕಡಿಮೆ ವಿದ್ಯುತ್ ಬಳಕೆ ಮಾಡುವ ಎಲ್‌ಇಡಿ ಬಲ್ಬ್‌ಗಳನ್ನೇ ಹಾಕಿಕೊಳ್ಳಿ. ಇವು ಮನೆಯನ್ನು ಬೆಳಗುತ್ತವೆ, ಇವುಗಳಿಂದ ಶಾಖ ಕೂಡ ಹೊರಹೊಮ್ಮುವುದಿಲ್ಲ.