ಅನೇಕರು ಮಾನಸಿಕ ಆರೋಗ್ಯವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ. ಈ ಬಗ್ಗೆ ಕಾಳಜಿ ವಹಿಸದಿದ್ದರೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ.
ಇತ್ತೀಚಿನ ದಿನಗಳಲ್ಲಿ ಜನರು ಅನೇಕ ರೀತಿಯ ಒತ್ತಡವನ್ನು ಎದುರಿಸುತ್ತಿದ್ದಾರೆ. ಖಿನ್ನತೆಯಂತಹ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ತಲೆನೋವು, ತಲೆಭಾರದಂತಹ ಸಮಸ್ಯೆಗಳು ಸಾಮಾನ್ಯವಾಗಿಬಿಟ್ಟಿವೆ. ಅಂತಹ ಪರಿಸ್ಥಿತಿಯಲ್ಲಿ ಪೇಯ್ನ್ ಕಿಲ್ಲರ್ ಅಥವಾ ಇನ್ಯಾವುದೇ ಔಷಧವನ್ನು ತೆಗೆದುಕೊಳ್ಳುವುದು ಅಪಾಯಕಾರಿ. ಇವುಗಳಿಂದ ಸಾಕಷ್ಟು ಅಡ್ಡಪರಿಣಾಮಗಳು ದೇಹದ ಮೇಲಾಗುತ್ತವೆ. ತಲೆನೋವು ಮತ್ತು ತಲೆಭಾರದ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಉತ್ತಮ ಮದ್ದು ಲಭ್ಯವಿದೆ.
ಬ್ರಾಹ್ಮಿ – ಮಾನಸಿಕ ಒತ್ತಡ, ಆಯಾಸದಿಂದ ತಲೆ ಭಾರವಾದಂತೆನಿಸಿದರೆ ಬ್ರಾಹ್ಮಿಯನ್ನು ಸೇವಿಸಬಹುದು. ಇದು ಮಾನಸಿಕ ಒತ್ತಡ, ತಲೆನೋವಿನಿಂದ ಪರಿಹಾರ ನೀಡುತ್ತದೆ.
ಅಶ್ವಗಂಧ – ಅಶ್ವಗಂಧವು ಒಂದು ಆಯುರ್ವೇದ ಔಷಧ. ಇದು ಮಾನಸಿಕ ಅಸ್ವಸ್ಥತೆಗಳು ಮತ್ತು ತಲೆ ಭಾರಕ್ಕೆ ಖಚಿತವಾದ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ. ಮಾನಸಿಕವಾಗಿ ಉದ್ವೇಗದಿಂದ ಮುಕ್ತವಾಗಿರಲು ಇದನ್ನು ಬಳಸಿ. ಅಶ್ವಗಂಧದಲ್ಲಿರುವ ಗುಣಗಳು ಮೆದುಳಿಗೆ ಎಲ್ಲ ರೀತಿಯಲ್ಲೂ ಪ್ರಯೋಜನವನ್ನು ನೀಡುತ್ತದೆ.
ಶಂಖಪುಷ್ಪಿ – ಶಂಖಪುಷ್ಪಿಯ ಸೇವನೆಯು ಮೆದುಳಿಗೆ ಮಾತ್ರವಲ್ಲದೇ ದೇಹಕ್ಕೂ ಅಷ್ಟೇ ಪ್ರಯೋಜನಕಾರಿ. ಇದನ್ನು ಆಯುರ್ವೇದದ ಸಂಪತ್ತು ಎಂದು ಕರೆಯುತ್ತಾರೆ. ಇದು ಮನಸ್ಸಿನ ಭಾರವನ್ನು ಹೋಗಲಾಡಿಸುತ್ತದೆ. ಈ ಹೂವಿನಿಂದ ಮಾಡಿದ ಶರಬತ್ತು ಅಥವಾ ಸಿರಪ್ ಅನ್ನು ಕುಡಿಯಬಹುದು.