
ಒಂದರ ಮೇಲೊಂದು ಸಿನಿಮಾಗಳಲ್ಲಿ ಬಿಜಿಯಾಗಿರುವ ವಿನಯ್ ರಾಜಕುಮಾರ್ ಅವರ ಹೊಸ ಸಿನಿಮಾದ ಪೋಸ್ಟರ್ ಅನ್ನು ಇಂದು ರಿಲೀಸ್ ಮಾಡಲಾಗಿದೆ. ವಿನಯ್ ರಾಜ್‌ಕುಮಾರ್ ಈ ಪೋಸ್ಟರ್ ಅನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಒಂದು ಸರಳ ಪ್ರೇಮ ಕಥೆ’ ಎಂಬ ಶೀರ್ಷಿಕೆಯ ಟೈಟಲ್ ಪೋಸ್ಟರ್ ಇದಾಗಿದ್ದು, ಸಿಂಪಲ್ ಸುನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಆಕ್ಷನ್ ಲವ್ ಸ್ಟೋರಿ ಕಥಾಂದರ ಹೊಂದಿರುವ ಈ ಚಿತ್ರವನ್ನು ಮೈಸೂರು ರಮೇಶ್ ನಿರ್ಮಾಣ ಮಾಡುತ್ತಿದ್ದು, ವಿನಯ್ ಕುಮಾರ್ ಗೆ ಜೋಡಿಯಾಗಿ ಮಲ್ಲಿಕಾ ಸಿಂಗ್, ಹಾಗೂ ಸ್ವಾತಿಷ್ಟ ಅಭಿನಯಿಸುತ್ತಿದ್ದಾರೆ. ವೀರ ಸಮರ್ಥ್ ಅವರ ಸಂಗೀತ ಈ ಚಿತ್ರಕ್ಕಿದೆ.
