ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆದಿದ್ದು, ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ತಮ್ಮ ಪರಮಾಪ್ತ ಸಿದ್ದರಾಮಯ್ಯರನ್ನು ಬಿಟ್ಟು ಸಿ.ಎಂ. ಇಬ್ರಾಹಿಂ ಜೆಡಿಎಸ್ ನತ್ತ ಮುಖ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಅಲ್ಲದೇ ಕಾಂಗ್ರೆಸ್ ತೊರೆಯುವ ತಮ್ಮ ನಿರ್ಧಾರವನ್ನು ಪ್ರಕಟಿಸುವ ಮುನ್ನ ಸಿ.ಎಂ. ಇಬ್ರಾಹಿಂ, ಸಿದ್ದರಾಮಯ್ಯ ವಿರುದ್ದ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಮಧ್ಯೆ ಇಂದು ವಿಧಾನಸೌಧದ ಮೊಗಸಾಲೆಯಲ್ಲಿ ಇಬ್ಬರು ನಾಯಕರ ಮುಖಾಮುಖಿಯಾಗಿದೆ.
ಈ ವೇಳೆ ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಅವರನ್ನುದ್ದೇಶಿಸಿ ವಾಟ್ ಲೀಡರ್ ಎಂದರು. ಆಗ ಸಿ.ಎಂ. ಇಬ್ರಾಹಿಂ, ಸಿದ್ದುರನ್ನು ತದೇಕಚಿತ್ತವಾಗಿ ನೋಡಿದ್ದು, ಇದಕ್ಕೆ ತಮಾಷೆಯಾಗಿ ಏನು ಗುರಾಸ್ತಿದ್ದೀಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಅಲ್ಲದೇ ಈ ಕಡೆ ಏನು ಬಂದಿದ್ದು ಎಂದು ಸಿದ್ದರಾಮಯ್ಯ ಕೇಳಿದರು.
ಅದಕ್ಕೆ ಉತ್ತರಿಸಿದ ಸಿ.ಎಂ. ಇಬ್ರಾಹಿಂ, ಆ ಕಡೆ ಏನೂ ಇಲ್ಲ. ಅದಕ್ಕೆ ಈ ಕಡೆ ಬಂದೆ ಎಂದರು. ಆಗ ಸಿದ್ದರಾಮಯ್ಯ ನಸುನಗುತ್ತಾ ಆ ಕಡೆ ಏನೂ ಇಲ್ವೋ ಎಂದು ಕಿಚಾಯಿಸಿದ್ದು, ಬಳಿಕ ಉಭಯ ನಾಯಕರು ಕೆಲ ಹೊತ್ತು ಲೋಕಾಭಿರಾಮಬಾಗಿ ಮಾತನಾಡಿದ್ದಾರೆ.