![](https://kannadadunia.com/wp-content/uploads/2021/12/vijaya-karnataka-4.jpg)
ಬೆಳಗಾವಿ ವಿಧಾನಪರಿಷತ್ ಚುನಾವಣಾ ಫಲಿತಾಂಶ ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ. ಬೆಳಗಾವಿ ಎಲೆಕ್ಷನ್ನಲ್ಲಿ ಗೋಕಾಕ್ ಸಾಹುಕಾರರ ಕುಟುಂಬವನ್ನು ಕಡೆಗಣಿಸಿದ್ರೆ ಫಲಿತಾಂಶ ಎಷ್ಟರ ಮಟ್ಟಿಗೆ ತಲೆ ಕೆಳಗೆ ಆಗಬಹುದು ಎಂಬುದು ರಾಷ್ಟ್ರೀಯ ಪಕ್ಷಗಳಿಗೆ ಮನವರಿಕೆ ಆದಂತೆ ಕಾಣುತ್ತಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಗೆಲುವಿನ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಬಿಜೆಪಿ ಮಾಡಿದ ತಪ್ಪಿನಿಂದಾಗಿ ಲಖನ್ಗೆ ಈ ಗೆಲುವು ಸಿಕ್ಕಿದೆ. ಇದನ್ನು ಲಖನ್ ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಬೇವಿನ ಗಿಡದ ಕೆಳಗೆ ಕುಳಿತು ಜನರನ್ನ ಟೀಕೆ ಮಾಡಿದಂತೆ ಅಲ್ಲ ಜನಸೇವೆ ಮಾಡೋದು ಎಂದು ಲಖನ್ಗೆ ಟಾಂಗ್ ನೀಡಿದ ಸತೀಶ್ ಜಾರಕಿಹೊಳಿ, ಜನರನ್ನು ಟಿಂಗಲ್ ಮಾಡುತ್ತಾ ಕೂತರೆ ಜನತೆ ಮುಂದಿನ ಎಲೆಕ್ಷನ್ ಯಾವಾಗ ಬರುತ್ತೆ ಅಂತಾ ಕಾಯುತ್ತಾ ಕೂರುತ್ತಾರೆ. ರಮೇಶ್ ಹಾಗೂ ಲಖನ್ ಇಬ್ಬರೂ ತಮ್ಮ ವರ್ತನೆ ಬದಲಾಯಿಸಿಕೊಳ್ಳಬೇಕಿದೆ. ಸಣ್ಣ ಜನರ ನಡುವೆ ಬಾಂಬ್ ಎಸೆದ ಹಾಗೆ ದೊಡ್ಡವರ ನಡುವೆಯೂ ಬಾಂಬ್ ಎಸೆದರೆ ಅನಾಹುತವೇ ಆಗುತ್ತೆ ಎಂದು ಹೇಳಿದ್ರು.