alex Certify ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಕೋತಿಗೆ ಅಂತ್ಯಕ್ರಿಯೆ ನೆರವೇರಿಸಿದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಕೋತಿಗೆ ಅಂತ್ಯಕ್ರಿಯೆ ನೆರವೇರಿಸಿದ ಜನ

ಭೋಪಾಲ್: ಪ್ರಾಣಿ-ಮಾನವ ಸಂಘರ್ಷದ ಮಧ್ಯೆ, ಕೆಲವೊಂದು ಮನಕಲಕುವ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಪ್ರಾಣಿಗಳು ಹಾಗೂ ಮಾನವರ ಅದ್ಭುತ ಸಂಬಂಧ ಇಂದಿಗೂ ಇವೆ. ಇದೀಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಕೋತಿಗೆ ಜನರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಮಧ್ಯಪ್ರದೇಶದ ರೇವಾ ಜಿಲ್ಲೆಯ ಪಟ್ಟಣದ ನಿವಾಸಿಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಕೋತಿಗೆ ಸಾಂಪ್ರದಾಯಿಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಟೀಥರ್ ಟೌನ್‌ನಲ್ಲಿ ಅಂತ್ಯಕ್ರಿಯೆ ನಡೆದಿದ್ದು, ಕೋತಿಯ ಮೃತದೇಹವನ್ನು ಬ್ಯಾಂಡ್ ಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು. ಒಬ್ಬ ವ್ಯಕ್ತಿ, ಶವವನ್ನು ಬಟ್ಟೆಯಲ್ಲಿ ಸುತ್ತಿ ಅದರ ಮೇಲೆ ಭಗವಂತ ರಾಮನ ಹೆಸರನ್ನು ಬರೆದಿದ್ದಾನೆ.

ಸೋಮವಾರ ವಿದ್ಯುತ್ ಕಂಬದ ಬಳಿ ಕೋತಿ ಶವವಾಗಿ ಪತ್ತೆಯಾಗಿತ್ತು. ಈ ಸಂಬಂಧ ಸ್ಥಳೀಯ ನಾಗರಿಕ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಕಪಿಯ ಅಂತಿಮ ಸಂಸ್ಕಾರವನ್ನು ನಾಗರಿಕರು ನಡೆಸಬಹುದು ಎಂದು ಅರಣ್ಯಾಧಿಕಾರಿಗಳು ಸೂಚಿಸಿದ್ರು. ಹೀಗಾಗಿ ಜನರು ಸೇರಿ ಸಾಂಪ್ರದಾಯಿಕ ರೀತಿಯಲ್ಲಿ ಕೋತಿಯ ಅಂತಿಮ ಸಂಸ್ಕಾರವನ್ನು ಮಾಡಿದ್ದಾರೆ. ಸಂಪ್ರದಾಯದಂತೆ ಸಂಪೂರ್ಣ ಗೌರವದಿಂದ ಕಪಿಯ ಶವವನ್ನು ಹೂಳಿದ್ದಾರೆ.

ದೇಶದ ಹಲವಾರು ಭಾಗಗಳಲ್ಲಿ, ಮಂಗಗಳನ್ನು ಭಗವಂತ ಹನುಮನ ಜೊತೆಗಿನ ಒಡನಾಟಕ್ಕಾಗಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಜನವರಿಯಲ್ಲಿ ರಾಜ್‌ಗಢ್ ಜಿಲ್ಲೆಯಲ್ಲಿ ಕೋತಿಯ ಅಂತ್ಯಕ್ರಿಯೆಗೆ ಸುಮಾರು 1,500 ಜನರು ಜಮಾಯಿಸಿದ್ದರು. ಜನರು ಶವಸಂಸ್ಕಾರ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದಂತೆ ಸ್ತೋತ್ರಗಳೊಂದಿಗೆ ಅಂತ್ಯಕ್ರಿಯೆಯನ್ನು ನಡೆಸಲಾಯಿತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...