ಹೈದರಾಬಾದ್: ವಿದ್ಯುತ್ ಬಿಲ್ ಪಾವತಿಸದಿರುವುದಕ್ಕೆ ವಿದ್ಯುತ್ ಸಂಪರ್ಕವನ್ನು ಕತ್ತರಿಸಿದ ಸಹಾಯಕ ಎಂಜಿನಿಯರ್ ಒಬ್ಬರನ್ನು ಥಳಿಸಿದ ಘಟನೆ ನಗರದಲ್ಲಿ ನಡೆದಿದೆ.
ಹೈದರಾಬಾದ್ನಲ್ಲಿ ವಿದ್ಯುತ್ ಇಲಾಖೆಯ ಸಹಾಯಕ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡ ನಾಲ್ವರು ಯುವಕರು, ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದೇಕೆ ಎಂದು ಪ್ರಶ್ನಿಸಿ, ಥಳಿಸಿದ್ದಾರೆ.
ಮೂಲಂಗಿ ಪರೋಟ ತಯಾರಿಸುವ ವಿಧಾನ
ಥಳಿತಕ್ಕೊಳಗಾದ ಅಧಿಕಾರಿಯನ್ನು ವಿಜಯಕುಮಾರ್ ಎಂದು ಗುರುತಿಸಲಾಗಿದೆ. ಅವರು ನೀಡಿರುವ ದೂರಿನಂತೆ ದಾಳಿ ಮಾಡಿದವರ ಪೈಕಿ ಒಬ್ಬನಾದ ವಿಶಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿತರು ಎರಡು ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ. ಇದರ ಮೊತ್ತ 15,000 ರೂ. ದಾಟಿತ್ತು. ಹೀಗಾಗಿ, ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು.