ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು ಇದರಲ್ಲಿ, ವಿದ್ಯುತ್ ಬಿಲ್ ಪಾವತಿಸಲು ಆರು ತಿಂಗಳ ಕಾಲಾವಕಾಶವಿರುತ್ತದೆ. ಬಿಲ್ ಪಾವತಿಸಿಲ್ಲವೆಂದು ವಿದ್ಯುತ್ ನಿಗಮದ ಸಿಬ್ಬಂದಿ ಕರೆಂಟ್ ಸ್ಥಗಿತಗೊಳಿಸುವಂತಿಲ್ಲ ಎಂದು ಹೇಳಲಾಗಿತ್ತು.
ಇದೀಗ ಈ ಕುರಿತಂತೆ ಬೆಸ್ಕಾಂ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದು ತಿಳಿಸಿದೆ. ಅಲ್ಲದೆ ಗ್ರಾಹಕರು ತಮ್ಮ ವಿದ್ಯುತ್ ಶುಲ್ಕ ಪಾವತಿಸಿರುವ ಕುರಿತು ಬೆಸ್ಕಾಂ ಮಿತ್ರ ಆಪ್ ನಲ್ಲಿ ದೃಢೀಕರಿಸಿಕೊಳ್ಳಲು ಸೂಚಿಸಿದೆ.
ಅಲ್ಲದೆ, ವಿದ್ಯುತ್ ಶುಲ್ಕ ಪಾವತಿಸಿ ಎಂದು ಗ್ರಾಹಕರಿಗೆ ಬೆಸ್ಕಾಂ ಸಿಬ್ಬಂದಿ ಯಾವುದೇ ಎಸ್ಎಂಎಸ್ ಕಳುಹಿಸುವುದಿಲ್ಲ. ಇಂತಹ ಸಂದೇಶ ಕಳುಹಿಸಿ ಸೈಬರ್ ವಂಚಕರು ನಿಮ್ಮನ್ನು ತಮ್ಮ ಮೋಸದ ಜಾಲಕ್ಕೆ ಬೀಳಿಸುವ ಸಾಧ್ಯತೆ ಇದ್ದು ಹೀಗಾಗಿ ಇಂತಹ ಸಂದೇಶ ಹಾಗೂ ಕರೆಗಳಿಗೆ ಪ್ರತಿಕ್ರಿಯಿಸದಿರಿ ಎಂದು ತಿಳಿಸಿದೆ.