ವಿದ್ಯಾವಂತ ನಿರುದ್ಯೋಗಿ ಯುವಕ – ಯುವತಿಯರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ವೃತ್ತಿ ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆ ಅಡಿ ವಿವಿಧ ವಿಷಯಗಳ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸೌರಶಕ್ತಿ ಪ್ಯಾನೆಲ್ ಅಳವಡಿಕೆ ಮತ್ತು ರಿಪೇರಿ ತರಬೇತಿಯನ್ನು 18ರಿಂದ 40 ವಯೋಮಿತಿ ಒಳಗಿರುವವರಿಗೆ ನೀಡಲಿದ್ದು ಕನಿಷ್ಠ ವಿದ್ಯಾರ್ಹತೆ ಎಸ್ ಎಸ್ ಎಲ್ ಸಿ. ಜೆಸಿಬಿ / ಟ್ರ್ಯಾಕ್ಟರ್ / ರೋಡ್ ರೋಲರ್ / ಅರ್ಥ್ ಮೂವರ್ಸ್ ಚಾಲನಾ ತರಬೇತಿಯನ್ನು ಇದೆ ವಯೋಮಾನದವರಿಗೆ ನೀಡಲಿದ್ದು, ಇದಕ್ಕೂ ಎಸ್ ಎಸ್ ಎಲ್ ಸಿ ಕನಿಷ್ಠ ವಿದ್ಯಾರ್ಹತೆಯಾಗಿದೆ.
ಹಾಗೆಯೇ ಎಸಿ / ಕಂಪ್ಯೂಟರ್ ಮತ್ತು ಮೊಬೈಲ್ ರಿಪೇರಿ ತರಬೇತಿಯನ್ನು ಎಸ್.ಎಸ್.ಎಲ್.ಸಿ. ಕನಿಷ್ಠ ವಿದ್ಯಾರ್ಹತೆ ಹೊಂದಿದವರಿಗೆ ನೀಡಲಿದ್ದು 18ರಿಂದ 40 ವರ್ಷ ವಯೋಮಿತಿ ಒಳಗಿರಬೇಕು. ಇನ್ನು ಪಿಯುಸಿ ಕಾಮರ್ಸ್ / ಬಿಕಾಂ ಆದ 21ರಿಂದ 40 ವರ್ಷ ವಯೋಮಿತಿ ಒಳಗಿರುವವರಿಗೆ ಅಕೌಂಟ್ ಅಂಡ್ ಟ್ಯಾಲಿ ತರಬೇತಿ ನೀಡಲಾಗುತ್ತದೆ.
ಬಿಇ ಪದವಿ ಹೊಂದಿರುವ 21 – 40 ವರ್ಷ ವಯೋಮಿತಿಯೊಳಗೆ ಇರುವವರಿಗೆ ಕ್ಯಾಡ್ / ಕ್ಯಾಡ್ ಪ್ಲಸ್ / ಜಾವಾ ಪೈಥಾನ್ ತರಬೇತಿ, ಡಿಪ್ಲೋಮೋ / ಯಾವುದೇ ಪದವಿ ಹೊಂದಿರುವ 21 ರಿಂದ 40 ವರ್ಷ ವಯೋಮಿತಿಯೊಳಗಿರುವವರಿಗೆ ವೆಬ್ ಡಿಸೈನಿಂಗ್ ತರಬೇತಿ, 2ಡಿ ಅನಿಮೇಷನ್, 3ಡಿ ಅನಿಮೇಷನ್ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ.
ಡಿಪ್ಲೋಮಾ ಪತ್ರಿಕೋದ್ಯಮ / ಪದವಿಯಲ್ಲಿ ಪತ್ರಿಕೋದ್ಯಮ ಪಡೆದ 21 ರಿಂದ 40 ವರ್ಷದ ವಯೋಮಿತಿ ಒಳಗಿರುವವರಿಗೆ ಟೆಲಿಜರ್ನಲಿಸಂ ತರಬೇತಿ ನೀಡಲಾಗುತ್ತದೆ. ಆಸಕ್ತರು ಸೇವಾ ಸಿಂಧು ಪೋರ್ಟಲ್ ಮೂಲಕ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರದಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.