ಪ್ರತಿಷ್ಠಿತ ಅಮೆರಿಕಾದ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುವ ಹೆಚ್ಚಿನ ವೆಚ್ಚವು ಹಲವಾರು ವಿದ್ಯಾರ್ಥಿಗಳನ್ನು ಸಾಲಗಾರರನ್ನಾಗಿ ಮಾಡಿಸುತ್ತದೆ. ಕೆಲವೊಮ್ಮೆ ಈ ಸಾಲಗಳು ಬಹಳಷ್ಟು ಹೆಚ್ಚಾದಾಗ ಅದನ್ನು ಪಾವತಿಸಲು ಹೆಣಗಾಡಬೇಕಾಗುತ್ತದೆ.
ನ್ಯೂಯಾರ್ಕ್ ಮೂಲದ 28 ವರ್ಷದ ಕಸ್ಸಂದ್ರ ಜೋನ್ಸ್ ಎಂಬ ಯುವತಿಯು ವಿದ್ಯಾರ್ಥಿ ಸಾಲದಿಂದ ಕಂಗೆಟ್ಟಿದ್ದಾಳೆ. ಹೆಚ್ಚುತ್ತಿರುವ ಸಾಲಗಳಿಂದ ಮುಕ್ತಿ ಪಡೆಯಲು ಆಕೆ ತನ್ನ ಅಂಡಾಣು ಮಾರಾಟ ಮಾಡಿದ್ರೂ ಪ್ರಯೋಜನವಾಗಿಲ್ಲ.
ವರದಿಯ ಪ್ರಕಾರ, ಕಸ್ಸಂದ್ರ 167,000 ಡಾಲರ್ ಅಂದ್ರೆ ಸುಮಾರು 1.2 ಕೋಟಿ ರೂಪಾಯಿಗಳ ವಿದ್ಯಾರ್ಥಿ ಸಾಲವನ್ನು ಹೊಂದಿದ್ದರು. ಅವರು ಪದವಿ ಸಮಯದಲ್ಲಿ ಬೋಧನಾ ಶುಲ್ಕವನ್ನು ಪಾವತಿಸಲು ಇಷ್ಟೊಂದು ಮೊತ್ತ ಸಾಲ ಪಡೆದಿದ್ದರು. ಆರ್ಥಿಕ ಸಂಕಷ್ಟವನ್ನು ನಿಭಾಯಿಸಲು ಕಸ್ಸಂದ್ರ, ಬಾಡಿಗೆಯನ್ನು ಪಾವತಿಸುವುದನ್ನು ತಪ್ಪಿಸುವುದಕ್ಕಾಗಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಳು.
ಈ ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ರೂ ಆಕೆ ಸಾಲದ ಸುಳಿಯಿಂದ ಹೊರಬರಲು ಸಾಧ್ಯವಾಗಿಲ್ಲ. ಬಳಿಕ ಸ್ನೇಹಿತರ ಮಾತಿನಂತೆ ತನ್ನ ಅಂಡಾಣುವನ್ನು ಮಾರಾಟ ಮಾಡಲು ನಿರ್ಧರಿಸಿದಳು. ಕಸ್ಸಂದ್ರಾ ಕ್ಯಾಲಿಫೋರ್ನಿಯಾದಲ್ಲಿ ತನ್ನ ಮೊದಲ ಅಂಡಾಣು ದೇಣಿಗೆಯೊಂದಿಗೆ 8,000 ಡಾಲರ್ ಹಣ ಗಳಿಸಿದಳು. ನಂತರ ಮತ್ತೆ ದಾನ ಮಾಡಿ 10,000 ಡಾಲರ್ ಗಳಿಸಿದಳು. ಆದರೂ ಕೂಡ ಈಕೆಯ ಸಾಲದ ಹೊರೆ ಮಾತ್ರ ಕಡಿಮೆಯಾಗಿಲ್ಲ.
ಮುಂದಿನ 10 ವರ್ಷಗಳವರೆಗೆ ಪ್ರತಿ ತಿಂಗಳು 2,000 ಡಾಲರ್ ಅನ್ನು ಈಕೆ ಪಾವತಿಸಬೇಕಾಗುತ್ತದೆ. ಅಂಡಾಣು ದಾನವು ಕಸ್ಸಂದ್ರ ತನ್ನ ಆರ್ಥಿಕ ಒತ್ತಡವನ್ನು ತಗ್ಗಿಸಲು ಸಹಾಯ ಮಾಡದಿರಬಹುದು. ಆದರೆ, ಅದು ಆಕೆಗೆ ಅಸ್ವಸ್ಥತೆಯ ಆರೋಗ್ಯ ಸಮಸ್ಯೆಯಿಂದ ಬಳಲುವಂತಾಯಿತು. ಕಸ್ಸಂದ್ರ ಅವರಿಗೆ ಹೊಟ್ಟೆಯ ಕೆಳಭಾಗದಲ್ಲಿ ಊತ ಮತ್ತು ನೋವು ಕಾಣಿಸಿಕೊಂಡು ನಡೆಯಲು ಕಷ್ಟವಾಗುತ್ತಿದೆಯಂತೆ.