alex Certify ವಿದ್ಯಾರ್ಥಿನಿಯನ್ನು ಕೊಂದು ತಿಂದಿದ್ದ ನರಭಕ್ಷಕ ಇಸ್ಸೆ ಸಾಗವಾ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿನಿಯನ್ನು ಕೊಂದು ತಿಂದಿದ್ದ ನರಭಕ್ಷಕ ಇಸ್ಸೆ ಸಾಗವಾ ಸಾವು

ಜಪಾನ್‌ನ ನರಭಕ್ಷಕ ಕೊಲೆಗಾರ ಇಸ್ಸೆ ಸಾಗವಾ ಎಂಬಾತನ ಜೀವನಗಾಥೆ ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. ನರಭಕ್ಷಕ ಕೊಲೆಗಾರನಾಗಿದ್ದ ಇಸ್ಸೆ ಸಾಗಾವಾ ನಂತರ ಪೋರ್ನ್ ಸ್ಟಾರ್ ಆಗಿ ಬದಲಾಗಿದ್ದ, 73 ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾನೆ.

ಈತ 1981 ರಲ್ಲಿ ಪ್ಯಾರಿಸ್‌ನಲ್ಲಿ ಡಚ್ ವಿದ್ಯಾರ್ಥಿನಿ ರೆನೀ ಹಾರ್ಟೆವೆಲ್ಡ್‌ ಎಂಬಾಕೆಯನ್ನು ಕೊಂದು ತಿಂದುಬಿಟ್ಟಿದ್ದ. ಆಕೆಯ ಶವದೊಂದಿಗೆ ಎಷ್ಟೋ ದಿನಗಳ ಕಾಲ ಸಂಭೋಗ ನಡೆಸಿದ್ದ ಪಾತಕಿ ಅವನು. ಇತ್ತೀಚೆಗೆ ಅಂದ್ರೆ ನವೆಂಬರ್ 24 ರಂದು ಈತ ನ್ಯುಮೋನಿಯಾದಿಂದ ಸಾವನ್ನಪ್ಪಿದ್ದಾನೆ.

ಸಾಗಾವಾ ಮೊದಲು ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ್ದ. ನಂತರ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ರೈಫಲ್‌ನಿಂದ ಆಕೆಯ ಕತ್ತಿನ ಹಿಂಭಾಗಕ್ಕೆ ಗುಂಡು ಹಾರಿಸಿದ್ದಾನೆ. ಈ ರೀತಿ ಆಕೆಯನ್ನು ಕೊಂದು ನರಭಕ್ಷಣೆ ಮಾಡಿದ್ದ ಈತ. ಇದೇ ಪ್ರಕರಣದಲ್ಲಿ ಸಾಗವಾನನ್ನು 1986ರಲ್ಲಿ ಬಂಧಿಸಲಾಗಿತ್ತು. ಆದರೆ ಆತ ಹುಚ್ಚನೆಂದು ತೀರ್ಮಾನಿಸಿದ ಫ್ರಾನ್ಸ್‌ ನ್ಯಾಯಾಲಯ ಆತನನ್ನು ಜೈಲಿನಿಂದ ಬಿಡುಗಡೆ ಮಾಡಿಬಿಟ್ಟಿತ್ತು. ಜಪಾನ್‌ಗೆ ಆಗಮಿಸಿದ ನಂತರ ಟೋಕಿಯೊದ ಮಾಟ್ಸುಜಾವಾ ಆಸ್ಪತ್ರೆಯ ಮನಶ್ಶಾಸ್ತ್ರಜ್ಞರು, ಸಾಗವಾ ಆರೋಗ್ಯವಾಗಿರುವುದನ್ನು ಪತ್ತೆ ಮಾಡಿದ್ದರು.

ಆದರೂ ಜಪಾನ್‌ನಲ್ಲಿ ಆತನನ್ನು ಜೈಲಿಗಟ್ಟಲು ಸಾಧ್ಯವಾಗಲೇ ಇಲ್ಲ. ಇಂತಹ ಕ್ರೂರ ಅಪರಾಧ ಮಾಡಿದ ಸಗಾವಾ ನಂತರ ಜಪಾನ್‌ನಲ್ಲಿ ಸೆಲೆಬ್ರಿಟಿಯಾಗಿಬಿಟ್ಟದ್ದ. ತಾನು ಮಾಡಿದ ಕೊಲೆ, ನರಭಕ್ಷಣೆ ಬಗ್ಗೆ ಆತ ಪುಸ್ತಕವನ್ನೂ ಬರೆದಿದ್ದ. ಕಚ್ಚಾ ಮಾಂಸ ತಿನ್ನುವ ಜಪಾನ್‌ನ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡನು. ಅಷ್ಟೇ ಅಲ್ಲ ಜಪಾನ್‌ನ ಪೋರ್ನ್ ಚಲನಚಿತ್ರಗಳಲ್ಲಿ ಸಹ ನಟಿಸಿದ್ದಾನೆ. ಆತನಲ್ಲಿ ಯಾವುದೇ ಪಶ್ಚಾತ್ತಾಪ ಅಥವಾ ಬದಲಾವಣೆ ಕಾಣಲೇ ಇಲ್ಲ. ಹೀಗೆ ಕ್ರೂರ ಅಪರಾಧ ಎಸಗಿದ್ರೂ ಶಿಕ್ಷೆಗೆ ಗುರಿಯಾಗದೇ ಬಿಂದಾಸ್‌ ಆಗಿದ್ದ ಸಾಗವಾ ಕೊನೆಗೂ ಇಹಲೋಕ ತ್ಯಜಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...