9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಪರಿಚಿತ ಯುವಕ ಮದ್ಯ ಕುಡಿಸಿ ತನ್ನ ಸ್ನೇಹಿತನ ಜೊತೆ ಸೇರಿ ಕಾರಿನಲ್ಲಿಯೇ ಲೈಂಗಿಕ ಕಿರುಕುಳ ನೀಡಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಸಿಂಧನೂರು ನಿವಾಸಿಯಾಗಿರುವ ಈ ಬಾಲಕಿ ನವೆಂಬರ್ 25 ರಂದು ಹೊಸಪೇಟೆಯಲ್ಲಿರುವ ತನ್ನ ಅಜ್ಜಿ ಮನೆಗೆ ಹೋಗಿ ನವೆಂಬರ್ 27ರಂದು ವಾಪಸ್ ಸಿಂಧನೂರಿಗೆ ಬರುವ ವೇಳೆ ಪರಿಚಿತ ಯುವಕ ಸಚಿನ್ ಎಂಬಾತ ಫೋನ್ ಮಾಡಿ ಕರೆಸಿಕೊಂಡಿದ್ದಾನೆ.
ಬಳಿಕ ಆಕೆಯನ್ನು ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಅಂಜನಾದ್ರಿ ಬೆಟ್ಟ, ಗಂಗಾವತಿ ಮೊದಲಾದಡೆ ಕರೆದೊಯ್ದಿದ್ದು ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ನಂತರ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದು ಇದೀಗ ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.