ಕೊರೊನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದಲೂ ಪೂರ್ಣ ಪ್ರಮಾಣದ ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳು ಇದೀಗ ಕೊರೊನಾ ಕಡಿಮೆಯಾಗಿರುವ ಕಾರಣಕ್ಕೆ ಮತ್ತೆ ಶಾಲಾ – ಕಾಲೇಜು ಆರಂಭವಾಗಿರುವುದರಿಂದ ಹರ್ಷಗೊಂಡಿದ್ದಾರೆ. ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಿದ್ದು ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ.
ಇನ್ನು ಪ್ರಥಮ ಮತ್ತು ಪಿಯು ತರಗತಿಗಳು ಖಾಸಗಿ ಕಾಲೇಜುಗಳಲ್ಲಿ ಈಗಾಗಲೇ ಆರಂಭವಾಗಿದ್ದರೂ ಸಹ ಸರ್ಕಾರಿ ಕಾಲೇಜುಗಳನ್ನು ಆರಂಭಿಸಿರಲಿಲ್ಲ. ಇದೀಗ ಗುರುವಾರದಿಂದ ಅಂದರೆ ಜೂನ್ 9ರ ನಾಳೆಯಿಂದ ಸರ್ಕಾರಿ ಪಿಯು ಕಾಲೇಜುಗಳು ಆರಂಭವಾಗಲಿವೆ ಎಂದು ತಿಳಿಸಲಾಗಿದೆ.
ದ್ವಿತೀಯ ಪಿಯುಸಿ ಮೌಲ್ಯಮಾಪನ ಕಾರ್ಯ ನಡೆಯುತ್ತಿರುವುದರಿಂದ ಉಪನ್ಯಾಸಕರ ಹಾಜರಾತಿ ಕಡಿಮೆ ಇರಲಿದೆ ಎನ್ನಲಾಗಿದ್ದು, ಆದರೆ ಮೌಲ್ಯಮಾಪನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿರುವ ಕಾರಣ ಜೂನ್ 13 ರಿಂದ ಉಪನ್ಯಾಸಕರು ಪೂರ್ಣಪ್ರಮಾಣದಲ್ಲಿ ಕಾಲೇಜಿಗೆ ಹಾಜರಾಗುವ ಸಾಧ್ಯತೆ ಇದೆ.