ಪಬ್‌ಗಳಲ್ಲಿ ಪಾರ್ಟಿ ಮಾಡುವವರಿಗೆ ಅನ್‌ಲಿಮಿಟೆಡ್ ಡ್ರಿಂಕ್ಸ್ ಆಫರ್ ಸಾಮಾನ್ಯ. ಪಾರ್ಟಿ ಮೂಡಿನಲ್ಲಿರೋ ಜನ ಮಿತಿಮೀರಿ ಕುಡಿಯೋದೂ ಉಂಟು. ಮದ್ಯಕ್ಕಾಗಿಯೇ ಜನರು ಸಾಕಷ್ಟು ಹಣ ಖರ್ಚು ಮಾಡ್ತಾರೆ.
ಆಸ್ಟ್ರೇಲಿಯಾದ ಪಬ್ ಒಂದು ಮದ್ಯಪ್ರಿಯ ಮಹಿಳೆಯರಿಗೆ ಅಚ್ಚರಿಯ ಆಫರ್ ಒಂದನ್ನು ಕೊಡ್ತಾ ಇದೆ. ಮಹಿಳೆಯರಿಗೆ ಉಚಿತವಾಗಿ ಡ್ರಿಂಕ್ಸ್ ನೀಡುವುದಾಗಿ ಪಬ್ ಹೇಳಿಕೊಂಡಿದೆ. ಆದರೆ ಮದ್ಯದ ಪ್ರಮಾಣವು ಮಹಿಳೆಯರ ಬ್ರಾ ಸೈಜ್‌ಗೆ ತಕ್ಕಂತಿರುತ್ತದೆ.
ಬ್ರಾ ಗಾತ್ರವು ದೊಡ್ಡದಾಗಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಆ ಮಹಿಳೆಗೆ ಮದ್ಯ ನೀಡಲಾಗುತ್ತದೆ. ಬ್ರಾ ಸೈಜ್ ಚಿಕ್ಕದಿದ್ದರೆ ಕಡಿಮೆ ಪ್ರಮಾಣದಲ್ಲಿ ಡ್ರಿಂಕ್ಸ್ ನೀಡುವುದಾಗಿ ಪಬ್‌ನಲ್ಲಿ ಆಫರ್ ಕೊಡಲಾಗಿತ್ತು. ಆಸ್ಟ್ರೇಲಿಯಾದ ಅಡಿಲೇಡ್ ನಗರದಲ್ಲಿರೋ ‘ವೂಲ್‌ಶೆಡ್ ಆನ್ ಹಿಂಡ್ಲಿ’ ಎಂಬ ಪಬ್ ನೀಡಿದ್ದ ಈ ಆಫರ್ ತೀವ್ರ ವಿವಾದವನ್ನೇ ಸೃಷ್ಟಿಸಿತ್ತು. ಪಬ್‌ನ ನಿಯಮಗಳ ಪ್ರಕಾರ ಎ-ಕಪ್ ಸೈಜ್‌ನ ಬ್ರಾ ಧರಿಸಿದ ಮಹಿಳೆಯರಿಗೆ ಒಂದು ಉಚಿತ ಪಾನೀಯವನ್ನು ನೀಡಲಾಗುತ್ತದೆ, ಬಿ-ಕಪ್ ಬ್ರಾ ಧರಿಸಿದ ಮಹಿಳೆಯರಿಗೆ 2 ಡ್ರಿಂಕ್ಸ್ ಫ್ರೀಯಾಗಿ ಸಿಗುತ್ತದೆ. ಸಿ-ಕಪ್‌ನ ಬ್ರಾ ಧರಿಸುವ ಮಹಿಳೆಯರಿಗೆ ಮೂರು ಡ್ರಿಂಕ್‌ಗಳನ್ನು ಫ್ರೀಯಾಗಿ ಕೊಡುವುದಾಗಿ ಪಬ್ ಹೇಳಿತ್ತು.
ಬ್ರಾ ಕಳಚಬೇಕೆಂಬ ನಿಯಮ..!
ಪಾನೀಯಗಳೇನೋ ಉಚಿತವಾಗಿ ಸಿಗುತ್ತವೆ, ಆದರೆ ಇದಕ್ಕಾಗಿ ತಮ್ಮ ಬ್ರಾ ಗಾತ್ರವನ್ನು ತೋರಿಸಲು ಮಹಿಳೆಯರು ಅದನ್ನು ಕಳಚಬೇಕೆಂದು ಕೂಡ ಹೇಳಲಾಗಿತ್ತು. ಈ ಅಸಹ್ಯಕರವಾದ ಕೊಡುಗೆ ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ. ಗ್ರಾಹಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಅಂತಿಮವಾಗಿ ಈ ಜಾಹೀರಾತನ್ನು ಪಬ್ ತೆಗೆದುಹಾಕಿದೆ. ಪಬ್ ಅಧಿಕಾರಿಗಳು ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದ್ದಾರೆ. ಜಾಹೀರಾತು ಕೆಲವರಿಗೆ ಅನಾನುಕೂಲ ಮತ್ತು ಮುಜುಗರವನ್ನುಂಟುಮಾಡಿದೆ, ಅದಕ್ಕಾಗಿ ಕ್ಷಮೆಯಾಚಿಸುತ್ತೇವೆ ಎಂದು ಜಾಲತಾಣದಲ್ಲಿ ಪಬ್ ಕಡೆಯಿಂದ ಸ್ಪಷ್ಟನೆ ಹೊರಬಿದ್ದಿದೆ.
ಕ್ಷಮೆ ಕೇಳುವ ಮೊದಲು, ಪಬ್ ಈ ಪ್ರಸ್ತಾಪವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿತ್ತು. ಈ ಪೋಸ್ಟ್ ಅನ್ನು ಪಬ್ ಸಾಮಾಜಿಕ ಮಾಧ್ಯಮದಲ್ಲಿ ಹಾಕಿತ್ತು. ‘ದ ಬಿಗ್, ದ ಬೆಟರ್’ ಎಂಬ ಟ್ಯಾಗ್‌ಲೈನ್ ನೀಡಲಾಗಿತ್ತು. ಬ್ರಾ ಧರಿಸುವುದು ತುಂಬಾ ಅನಾನುಕೂಲಕರ, ಆದ್ದರಿಂದ ಅದನ್ನು ಶೆಡ್‌ನಲ್ಲಿ ನೇತುಹಾಕಿ ಮತ್ತು ಅದನ್ನು ಸಡಿಲಗೊಳಿಸಿ ಎಂದೆಲ್ಲ ಬರೆಯಲಾಗಿತ್ತು. ನೆಟ್ಟಿಗರಿಂದಲೂ ವಿರೋಧ ವ್ಯಕ್ತವಾದ ಬಳಿಕ ಪಬ್ ಎಚ್ಚೆತ್ತುಕೊಂಡು ಕ್ಷಮೆಯಾಚಿಸಿದೆ.