ಖಾತೆ ತೆರೆಯಲು ಬ್ಯಾಂಕಿಗೆ ಹೋಗಬೇಕು. ಅಲ್ಲಿ ಅವರು ಕೇಳಿದ ದಾಖಲೆಗಳನ್ನು ನೀಡಬೇಕು ಎಂಬುದು ಈವರೆಗೆ ಗ್ರಾಹಕರ ಅಳಲಾಗಿತ್ತು. ಆದರೆ ಇದಕ್ಕೆ ಕರ್ಣಾಟಕ ಬ್ಯಾಂಕ್ ಹೊಸ ದಾರಿಯೊಂದನ್ನು ಹುಡುಕಿದೆ.
ಹೌದು, ಕರ್ಣಾಟಕ ಬ್ಯಾಂಕ್ ಖಾತೆ ತೆರೆಯಬಯಸುವ ಹೊಸ ಗ್ರಾಹಕರಿಗೆ ವಿಶಿಷ್ಟ ಸೌಲಭ್ಯವೊಂದನ್ನು ಪರಿಚಯಿಸಿದ್ದು, ಇದರ ಮೂಲಕ ಗ್ರಾಹಕರು ತಾವಿರುವ ಸ್ಥಳದಿಂದಲೇ ವಿಡಿಯೋ ಕರೆ ಮಾಡಿ ಉಳಿತಾಯ ಖಾತೆಯನ್ನು ತೆರೆಯಬಹುದಾಗಿದೆ.
ಬುಧವಾರದಂದು ಈ ಸೌಲಭ್ಯವನ್ನು ಲೋಕಾರ್ಪಣೆಗೊಳಿಸಲಾಗಿದ್ದು, ಈ ವ್ಯವಸ್ಥೆಯಡಿ ಡಿಜಿಟಲ್ ಪ್ರಕ್ರಿಯೆ ಮೂಲಕ ಕಾಗದ ರಹಿತವಾಗಿ ಖಾತೆ ತೆರೆಯಬಹುದಾಗಿದೆ. ಗ್ರಾಹಕರು ತಮ್ಮ ಆಧಾರ್/ಪಾನ್ ಸಂಖ್ಯೆಯನ್ನು ನಮೂದಿಸಿ ಉಳಿತಾಯ ಖಾತೆಯನ್ನು ಕೆಲವೇ ನಿಮಿಷಗಳಲ್ಲಿ ಆರಂಭಿಸಬಹುದಾಗಿದೆ.