ವಿಟಮಿನ್ ಡಿ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಜೀವಸತ್ವ. ಇದು ಹಲವು ದೇಹದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದು ಸೂರ್ಯನ ಬೆಳಕಿನಿಂದ ನಿಮಗೆ ಸಿಗುತ್ತದೆ. ಹಾಗೇ ಮೊಟ್ಟೆಯ ಹಳದಿ ಭಾಗ, ಚೀಸ್, ಬೀಜಗಳು, ಮುಂತಾದವುಗಳಲ್ಲಿ ವಿಟಮಿನ್ ಡಿ ಇರುತ್ತದೆ.
ಇದರ ಕೊರತೆಯಿಂದ ಆಯಾಸ, ಮೂಳೆ ಸಮಸ್ಯೆ, ಖಿನ್ನತೆ, ದೌರ್ಬಲ್ಯ ಮುಂತಾದ ಸಮಸ್ಯೆಗಳು ಉದ್ಭವಿಸುತ್ತದೆ. ಹಾಗೇ ಈ ವಿಟಮಿನ್ ಡಿ ಸೌಂದರ್ಯ ವೃದ್ಧಿಗೊಳ್ಳಲು ಬಹಳ ಮುಖ್ಯ. ಇದರಿಂದ 5 ಸೌಂದರ್ಯ ಪ್ರಯೋಜನಗಳನ್ನು ಪಡೆಯಬಹುದು.
*ದೇಹದಲ್ಲಿ ವಿಟಮಿನ್ ಡಿ ಸಾಕಷ್ಟಿದ್ದರೆ ಚರ್ಮ ಕೆಂಪಾಗುವುದು, ತುರಿಕೆಯಾಗುವುದು ಕಡಿಮೆಯಾಗುತ್ತದೆ.
*ವಿಟಮಿನ್ ಡಿ ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು, ಇದು ಮೊಡವೆಗಳನ್ನು ನಿವಾರಿಸುತ್ತದೆ.
*ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾದರೆ ಚರ್ಮದಲ್ಲಿ ವಯಸ್ಸಾದ ಲಕ್ಷಣಗಳು ಕಂಡುಬರುತ್ತದೆ. ಹಾಗಾಗಿ ವಿಟಮಿನ್ ಡಿ ಮುಖದ ಸುಕ್ಕು, ನೆರಿಗೆಗಳನ್ನು ನಿವಾರಿಸುತ್ತದೆ.
*ವಿಟಮಿನ್ ಡಿ ಕೂದಲಿನ ಕೋಶಗಳನ್ನು ಉತ್ತೇಜಿಸಿ ಕೂದಲು ಬೆಳವಣಿಗೆಗೆ ಹೊಂದಲು ಸಹಕಾರಿಯಾಗಿದೆ.
*ಇದು ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸಿ ಕೂದಲನ್ನು ಆರೋಗ್ಯವಾಗಿರಿಸುತ್ತದೆ.