ನೀವು ವಿಟಮಿನ್ ಸಿ ಯಿಂದ ಬಳಲುತ್ತಿದ್ದೀರಾ? ಅದನ್ನು ತಿಳಿದುಕೊಳ್ಳುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಿರಾ? ಇಲ್ಲಿದೆ ಸರಳ ಉಪಾಯ.
ನಿಮ್ಮ ಕೂದಲು ಒಣಗುತ್ತಿದೆಯಾ? ಎಣ್ಣೆ ಹಚ್ಚಿ ಸಂಜೆಯಾಗುತ್ತಲೇ ನಿಮ್ಮ ತಲೆಕೂದಲು ಒಣಗಿದೆ ಎಂದು ನಿಮಗನಿಸುತ್ತಿದೆಯೇ, ಅದರೊಂದಿಗೆ ಚರ್ಮವೂ ಒಣಗುತ್ತಿದೆಯೇ ಇವೆಲ್ಲಾ ವಿಟಮಿನ್ ಸಿ ಕಡಿಮೆಯಾಗುವುದರ ಲಕ್ಷಣ.
ಸಣ್ಣ ಗಾಯವೂ ಬೇಗ ಗುಣವಾಗುತ್ತಿಲ್ಲವೇ, ಮತ್ತೆ ನೋವು ಕೊಡುತ್ತಿದೆಯೇ, ಇದು ಕೂಡಾ ವಿಟಮಿನ್ ಸಿ ಲಕ್ಷಣ.
ಕಿವಿ ಹಣ್ಣು, ಪೈನಾಪಲ್, ಸ್ಟ್ರಾಬೆರ್ರಿ, ಕಿತ್ತಳೆ, ಬಾಳೆಹಣ್ಣು, ಮುಸುಂಬೆ, ಲಿಂಬೆ, ಆಪಲ್, ದ್ರಾಕ್ಷಿ, ಬಟಾಟೆಗಳಲ್ಲಿ ವಿಟಮಿನ್ ಸಿ ಹೇರಳವಾಗಿದೆ. ದಿನ ನಿತ್ಯದ ಅಹಾರದಲ್ಲಿ ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ವಿಟಮಿನ್ ಸಿಯನ್ನು ಹೆಚ್ಚಿಸಿಕೊಳ್ಳಬಹುದು. ಗರ್ಭಿಣಿಯರು ಈ ಹಣ್ಣುಗಳನ್ನು ಸೇವಿಸುವುದರ ಮೂಲಕ ಅನಗತ್ಯವಾಗಿ ಮಾತ್ರೆ ತಿನ್ನುವುದನ್ನು ಕಡಿಮೆ ಮಾಡಬಹುದು.