ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ವಿಜಯ್ ಹಜಾರೆ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಮೂರು ಪಂದ್ಯಗಳನ್ನಾಡಿದ ಅವರು, ಮೂರರಲ್ಲಿಯೂ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.
ಟೂರ್ನಿಯ ಎಲೈಟ್ ಡಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಮಹಾರಾಷ್ಟ್ರ ತಂಡ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ತಂಡಕ್ಕೆ ಆಸರೆಯಾಗಿ ರುತುರಾಜ್ ಗಾಯಕ್ವಾಡ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಶನಿವಾರ ಕೇರಳದ ವಿರುದ್ಧ ನಡೆದ ಮೂರನೇ ಪಂದ್ಯದಲ್ಲಿಯೂ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ.
ಕೇರಳ ತಂಡದ ವಿರುದ್ಧ ನಡೆದ ಮೂರನೇ ಪಂದ್ಯದಲ್ಲಿ ಗಾಯಕ್ವಾಡ್ 129 ಎಸೆತಗಳನ್ನು ಎದುರಿಸಿ 124 ರನ್ ಗಳನ್ನು ಗಳಿಸಿದ್ದಾರೆ. ಇದರಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಸೇರಿವೆ. ಈ ರನ್ ಗಳ ಸಹಾಯದಿಂದ ಮಹಾರಾಷ್ಟ್ರ 8 ವಿಕೆಟ್ ಕಳೆದುಕೊಂಡು 291 ರನ್ ಗಳಿಸಿದೆ.
ಕೋವಿಡ್ ಸಂಕಷ್ಟದ ನಡುವೆ ಮಕ್ಕಳಲ್ಲಿ ಆರಂಭವಾದ ವಿಚಿತ್ರ ಸಿಂಡ್ರೋಮ್
ಇದಕ್ಕೂ ಮುನ್ನ ನಡೆದ ಛತ್ತೀಸ್ ಘಡ ಹಾಗೂ ಮಧ್ಯ ಪ್ರದೇಶ ವಿರುದ್ಧದ ಪಂದ್ಯಗಳಲ್ಲಿ ರುತುರಾಜ್ ಕ್ರಮವಾಗಿ ಅಜೇಯ 154 ಹಾಗೂ 136 ರನ್ ಗಳಿಸಿದ್ದರು. ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದ ಐಪಿಎಲ್ ಟೂರ್ನಿಯಲ್ಲಿ ಸಿ ಎಸ್ ಕೆ ಪರ ಬ್ಯಾಟ್ ಬೀಸಿದ್ದ ರುತುರಾಜ್ ಅತೀ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ.
ಈ ಮೂಲಕ ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟೂರ್ನಿಯಲ್ಲಿ ಇಲ್ಲಿಯವರೆಗೂ 414 ರನ್ ಗಳಿಸಿರುವ ರುತುರಾಜ್ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.