alex Certify ವಿಜಯ್ ಸಂಕೇಶ್ವರ್ ಜೀವನಾಧಾರಿತ ಚಿತ್ರ ‘ವಿಜಯಾನಂದ’ ನಾಳೆ ತೆರೆಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಜಯ್ ಸಂಕೇಶ್ವರ್ ಜೀವನಾಧಾರಿತ ಚಿತ್ರ ‘ವಿಜಯಾನಂದ’ ನಾಳೆ ತೆರೆಗೆ

ಖ್ಯಾತ ಉದ್ಯಮಿ ವಿಜಯ್ ಸಂಕೇಶ್ವರ್ ಜೀವನಾಧಾರಿತ ಚಿತ್ರ ‘ವಿಜಯಾನಂದ’ ನಾಳೆ ತೆರೆಗೆ ಬರಲಿದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಇವರು ಕೇವಲ ಒಂದು ಲಾರಿಯಿಂದ ಆರಂಭಿಸಿ ಇಂದು ವಿ ಆರ್ ಎಲ್ ಎಂಬ ದೊಡ್ಡ ಸಮೂಹವನ್ನು ಕಟ್ಟಿ ಬೆಳೆಸಿದ ಉದ್ಯಮಿಯಾಗಿ ಹೇಗೆ ಬೆಳೆದರು ಎಂಬ ನೈಜ ಕಥೆ ಸಿನಿಮಾ ರೂಪ ಪಡೆದಿದೆ.

ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರದ ಕುರಿತು ಪ್ರೇಕ್ಷಕರು ಕೂಡ ತೀವ್ರ ಕುತೂಹಲ ಹೊಂದಿದ್ದಾರೆ. ವಿ ಆರ್ ಎಲ್ ಸಮೂಹದ ಸಂಸ್ಥಾಪಕ ಮಾತ್ರವಲ್ಲದೇ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದರಲ್ಲಿ ಯಶಸ್ಸು ಕಂಡಿರುವ ವಿಜಯ್ ಸಂಕೇಶ್ವರ್ ಅವರ ಕುರಿತ ಈ ಚಿತ್ರ ಎಲ್ಲರಿಗೂ ಸ್ಪೂರ್ತಿಯಾಗುವುದು ಖಚಿತ.

ಸಿನಿಮಾದಲ್ಲಿ ನಿಹಾಲ್, ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಟಿಸಿದ್ದಾರೆ. ಭರತ್‌ ಬೋಪಣ್ಣ, ವಿಜಯ್ ಸಂಕೇಶ್ವರ್ ಪುತ್ರ ಆನಂದ್‌ ಸಂಕೇಶ್ವರ್‌ ಪಾತ್ರದಲ್ಲಿದ್ದರೆ, ಅನಂತ್ ನಾಗ್, ವಿಜಯ್ ಸಂಕೇಶ್ವರ್‌ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಕಾಶ್ ಬೆಳವಾಡಿ ಆರ್‌ಆರ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶೈನ್ ಶೆಟ್ಟಿ ನಿರ್ದೇಶಕ ದಯಾಳ್ ಪದ್ಮನಾಭ್ ಕೂಡ ಚಿತ್ರದಲ್ಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...