ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಪ್ರಿಯಾಮಣಿ ತಮ್ಮ ಪತಿ ಮುಸ್ತಫಾರಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.
ದಾಂಪತ್ಯದಲ್ಲಿ ಬಿರುಕು ಬಂದಿರುವ ಕಾರಣ ಪ್ರಿಯಾಮಣಿ ವಿಚ್ಛೇದನ ಪಡೆಯುತ್ತಿದ್ದಾರೆ. ಅಲ್ಲದೆ ದಂಪತಿ ವಿವಾಹವಾಗಿ ಹಲವು ವರ್ಷಗಳಾದರೂ ಮಕ್ಕಳಾಗದೇ ಇರುವುದು ಮತ್ತೊಂದು ಕಾರಣ ಎನ್ನಲಾಗಿತ್ತು.
ಇದೀಗ ಈ ವದಂತಿ ಕುರಿತು ನಟಿ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದು, ವಿಚ್ಛೇದನ ವಿಚಾರವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ದಾಂಪತ್ಯ ಜೀವನದಲ್ಲಿ ನಾವುಗಳು ಸುಖವಾಗಿದ್ದೇವೆ. ವಿಚ್ಛೇದನ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.