alex Certify ವಿಚ್ಛೇದನ ಪಡೆದ ವ್ಯಕ್ತಿಗೆ 31 ಡಿಸೆಂಬರ್ 9999 ರ ವರೆಗೆ ಇಸ್ರೇಲ್‍ನಿಂದ ಹೊರಹೋಗಲು ನಿರ್ಬಂಧ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಛೇದನ ಪಡೆದ ವ್ಯಕ್ತಿಗೆ 31 ಡಿಸೆಂಬರ್ 9999 ರ ವರೆಗೆ ಇಸ್ರೇಲ್‍ನಿಂದ ಹೊರಹೋಗಲು ನಿರ್ಬಂಧ..!

ವಿಲಕ್ಷಣ ವಿಚ್ಛೇದನದ ಕಾನೂನಿನ ಕಾರಣದಿಂದಾಗಿ 31 ಡಿಸೆಂಬರ್ 9999 ರವರೆಗೆ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಇಸ್ರೇಲ್ ತೊರೆಯುವುದನ್ನು ನಿಷೇಧಿಸಲಾಗಿದೆ.

44 ವರ್ಷದ ನೋಮ್ ಹಪ್ಪರ್ಟ್ ಎಂಬಾತ 31 ಡಿಸೆಂಬರ್ 9999 ರವರೆಗೆ ಅಥವಾ ಭವಿಷ್ಯದ ಮಗುವಿನ ಬೆಳವಣಿಗೆಗಾಗಿ ಅವರು ಆಸ್ಟ್ರೇಲಿಯನ್ ಡಾಲರ್ 3.34 ಮಿಲಿಯನ್ (Rs 18.19 ಕೋಟಿ) ಗಿಂತ ಹೆಚ್ಚು ಪಾವತಿಸುವವರೆಗೆ ದೇಶವನ್ನು ತೊರೆಯುವುದನ್ನು ನಿರ್ಬಂಧಿಸಲಾಗಿದೆ.

ಹಪ್ಪರ್ಟ್ ತನ್ನ ಮಾಜಿ ಪತ್ನಿ ಇಸ್ರೇಲ್ ಗೆ ತೆರಳಿದ ಒಂದು ವರ್ಷದ ನಂತರ ತನ್ನ ಮಕ್ಕಳಿಗಾಗಿ 2012 ರಲ್ಲಿ ಇಸ್ರೇಲ್‌ಗೆ ತೆರಳಿದ್ದರು. ಪತ್ನಿಯು ಇಸ್ರೇಲ್ ನ್ಯಾಯಾಲಯದಲ್ಲಿ ಆತನ ವಿರುದ್ಧ ವಿಚ್ಛೇದನದ ಮೊಕದ್ದಮೆ ಹೂಡಿದ್ದಾಳೆ. 2013 ರಲ್ಲಿ, ನ್ಯಾಯಾಲಯವು ಹಪ್ಪರ್ಟ್ ವಿರುದ್ಧ ಸ್ಟೇ-ಆಫ್-ಎಕ್ಸಿಟ್ ಆದೇಶವನ್ನು ಹೊರಡಿಸಿದೆ. ಇಬ್ಬರೂ ಮಕ್ಕಳಿಗೆ 18 ವರ್ಷ ತುಂಬುವವರೆಗೆ ಅವರು ಯಾವುದೇ ಕಾರಣಕ್ಕೂ ದೇಶವನ್ನು ಬಿಡುವಂತಿಲ್ಲ ಎಂದು ಆದೇಶಿಸಿದೆ.

2013 ರಿಂದ, ತಾನು ಇಸ್ರೇಲ್‌ನಲ್ಲಿ ಲಾಕ್ ಆಗಿರುವುದಾಗಿ ಹಪ್ಪರ್ಟ್ ಅಸಹಾಯಕತೆ ವ್ಯಕ್ತಪಡಿಸಿದ್ದಾನೆ. ಇಸ್ರೇಲಿ ಮಹಿಳೆಯನ್ನು ಮದುವೆಯಾದ ಕಾರಣ, ಇಸ್ರೇಲಿ ನ್ಯಾಯ ವ್ಯವಸ್ಥೆಯಿಂದ ಕಿರುಕುಳಕ್ಕೊಳಗಾದ ಅನೇಕ ವಿದೇಶಿ ಪ್ರಜೆಗಳಲ್ಲಿ ತಾನೂ ಒಬ್ಬ ಎಂದು ಅವರು ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ವಿಚ್ಛೇದನ ಕಾನೂನು ಎಂದರೆ, ಮಹಿಳೆಯರು ತಮ್ಮ ಮಕ್ಕಳ ತಂದೆಯ ಮೇಲೆ ಪ್ರಯಾಣ ನಿಷೇಧವನ್ನು ಮಾಡಬಹುದು. ಅವರು ಮಕ್ಕಳಿಗಾಗಿ ವಿಚ್ಛೇದಿತ ಪತಿಯಿಂದ ಹಣವನ್ನು ಪಡೆಯುತ್ತಾರೆ. ಪುರುಷರು ತಮ್ಮ ಆದಾಯದ ಶೇಕಡಾ 100 ಅಥವಾ ಅದಕ್ಕಿಂತ ಹೆಚ್ಚಿನದನ್ನು ಪಾವತಿಸಬೇಕಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...