
ಪುತ್ರನ ಅಶ್ಲೀಲ ಬುಕ್, ಸಿಡಿ ಮೊದಲಾವುಗಳನ್ನು ಎಸೆದಿದ್ದಕ್ಕಾಗಿ ನ್ಯಾಯಾಧೀಶರು ಪೋಷಕರಿಗೇ ದಂಡ ಹಾಕಿದ್ದು, ಮಗನಿಗೆ 30,441 ಡಾಲರ್ ಪಾವತಿಸಲು ಆದೇಶಿಸಿದ್ದಾರೆ.
ಡೇವಿಡ್ ವರ್ಕಿಂಗ್ ತನ್ನ ಹೆತ್ತವರ ವಿರುದ್ಧ ಮೊಕದ್ದಮೆಯನ್ನು ಗೆದ್ದ ಸುಮಾರು 8 ತಿಂಗಳ ನಂತರ, ಈ ವಾರ ಯುಎಸ್ ಜಿಲ್ಲಾ ನ್ಯಾಯಾಧೀಶ ಪೌಲ್ ಮಲೋನಿ ಇಂತಹುದೊಂದು ನಿರ್ಧಾರ ಪ್ರಕಟಿಸಿದ್ದಾರೆ.
43 ವರ್ಷದ ಮಗನ ಅಶ್ಲೀಲ ಚಲನಚಿತ್ರಗಳು, ನಿಯತಕಾಲಿಕೆಗಳು ಮತ್ತು ಇತರ ವಸ್ತುಗಳ ಸಂಗ್ರಹವನ್ನು ಹೊರಹಾಕುವ ಹಕ್ಕನ್ನು ಪೋಷಕರು ಹೊಂದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದು, ಅದು 29,000 ಡಾಲರ್(£ 21,500) ಮೌಲ್ಯದ್ದಾಗಿದೆ ತಿಳಿಸಿದ್ದಾರೆ.
ತೀರ್ಪಿನಲ್ಲಿ, ನ್ಯಾಯಾಧೀಶರು ತಜ್ಞರು ನಿಗದಿಪಡಿಸಿದ ಮೌಲ್ಯವನ್ನು ಅನುಸರಿಸಿದ್ದಾರೆ ಎಂದು MLive.com ವರದಿ ಹೇಳಿದೆ. ನ್ಯಾಯಾಲಯವು ಡೇವಿಡ್ ವರ್ಕಿಂಗ್ ನ ಪೋಷಕರಿಗೆ ತಮ್ಮ ಮಗನ ವಕೀಲರಿಗೆ 14,500 ಡಾಲರ್ (£ 10,500) ಪಾವತಿಸುವಂತೆ ಆದೇಶಿಸಿದೆ.
ವಿಚ್ಛೇದನದ ನಂತರ, ಡೇವಿಡ್ ವರ್ಕಿಂಗ್ ತನ್ನ ಹೆತ್ತವರ ಗ್ರ್ಯಾಂಡ್ ಹೆವನ್ ಮನೆಯಲ್ಲಿ ಸುಮಾರು 10 ತಿಂಗಳು ವಾಸಿಸುತ್ತಿದ್ದರು, ಅವರು ಅಂತಿಮವಾಗಿ ಇಂಡಿಯಾನಾದ ಮುನ್ಸಿಗೆ ತೆರಳಿದ್ದರು. ಅವರು ಸ್ಥಳಾಂತರಗೊಂಡ ನಂತರ, ಅವರ ಚಲನಚಿತ್ರಗಳು ಮತ್ತು ನಿಯತಕಾಲಿಕೆಗಳ ಪೆಟ್ಟಿಗೆಗಳು ಕಾಣೆಯಾಗಿವೆ ಎಂದು ಅವರಿಗೆ ಗೊತ್ತಾಗಿದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ನೀಡಿದ ತೀರ್ಪಿನಲ್ಲಿ ನ್ಯಾಯಾಧೀಶ ಮಲೋನಿ, ನಾಶವಾದ ಆಸ್ತಿ ಡೇವಿಡ್ ಗೆ ಸೇರಿದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಪ್ರತಿವಾದಿಗಳು ತಾವು ಆಸ್ತಿಯನ್ನು ನಾಶಪಡಿಸಿದ್ದೇವೆ ಎಂದು ಪದೇ ಪದೇ ಒಪ್ಪಿಕೊಂಡಿದ್ದಾರೆ ಎಂಬುದನ್ನು ಪರಿಗಣಿಸಲಾಗಿದೆ. ಹಾಗಾಗಿ ದಂಡ ಹಾಕಲಾಗಿದೆ ಎಂದು ತಿಳಿಸಿದ್ದಾರೆ.