ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ವಿಐಪಿ ಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರನ್ನು ಕಾರಿನಿಂದ ಕೆಳಗಿಳಿಸಿದ ಘಟನೆ ನಡೆದಿದೆ.
ಉದ್ಧವ್ ಠಾಕ್ರೆ ಸಂಪುಟದಲ್ಲಿ ಸಚಿವರೂ ಆಗಿರುವ ಆದಿತ್ಯ ಠಾಕ್ರೆ ತಮ್ಮ ತಂದೆಯವರ ಜೊತೆಯಲ್ಲಿಯೇ ಕಾರಿನಲ್ಲಿ ಬಂದಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಸಿಬ್ಬಂದಿ ಎಸ್.ಪಿ.ಜಿ. ಪಡೆ ವಿಐಪಿ ಲಿಸ್ಟ್ ಪರಿಶೀಲಿಸಿದೆ.
ಅದರಲ್ಲಿ ಆದಿತ್ಯ ಠಾಕ್ರೆ ಅವರ ಹೆಸರು ಇರಲಿಲ್ಲವಾದ ಕಾರಣ ಅವರನ್ನು ಮುಖ್ಯಮಂತ್ರಿಗಳ ಕಾರಿನಿಂದ ಕೆಳಗಿಳಿಯುವಂತೆ ಸೂಚಿಸಲಾಗಿದೆ. ಈ ವೇಳೆ ಆದಿತ್ಯ ಠಾಕ್ರೆ ಇರುಸುಮುರುಸುಗೊಂಡಿದ್ದು, ಮಧ್ಯಪ್ರವೇಶಿಸಿದ ಅವರ ತಂದೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಆದಿತ್ಯ ತಮ್ಮ ಪುತ್ರ ಮಾತ್ರವಲ್ಲ ಸಚಿವ ಸಂಪುಟದ ಸಹೋದ್ಯೋಗಿಯೂ ಹೌದು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಬಳಿಕವಷ್ಟೇ ಆದಿತ್ಯ ಠಾಕ್ರೆ ಅವರಿಗೆ ಕಾರಿನಲ್ಲಿ ತೆರಳಲು ಅವಕಾಶ ಮಾಡಿಕೊಡಲಾಗಿದೆ.