ಚಳಿಗಾಲ ಬಂತೆಂದರೆ ಕ್ರೀಮ್ ಲೋಷನ್ ಗಳ ಸಂಖ್ಯೆ ಕಬೋರ್ಡ್ ಗಳಲ್ಲಿ ಹೆಚ್ಚಾಗುತ್ತದೆ.
ಯಾಕೆಂದರೆ ಅವುಗಳು ಇಲ್ಲದೆ ಹೊರ ಹೋಗಲು ಸಾಧ್ಯವಿಲ್ಲ. ಅದರ ಜೊತೆಗೆ ಮನೆಯಲ್ಲೇ ಸ್ವಲ್ಪ ಕೇರ್ ತೆಗೆದುಕೊಂಡರೆ ತ್ವಚೆಯ ಆರೋಗ್ಯ ಇನ್ನೂ ಚೆನ್ನಾಗಿರುತ್ತದೆ. ಇಲ್ಲಿವೆ ಚಳಿಗಾಲಕ್ಕೆ ಒಂದಿಷ್ಟು ಸಲಹೆಗಳು.
* ಚಳಿಗಾಲದಲ್ಲಿ ವಾರಕ್ಕೊಮ್ಮೆಯಾದರೂ ಎಣ್ಣೆ-ಸ್ನಾನ ಮಾಡಬೇಕು. ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.
* ಚಳಿಗಾಲದಲ್ಲಿ ಪಪ್ಪಾಯಿ, ಜೇನು, ಬಾದಾಮಿಯ ಫೇಸ್ ಪ್ಯಾಕ್‌ಗಳನ್ನು ಮಾಡಿಕೊಂಡರೆ ತ್ವಚೆ ಮೃದುವಾಗುತ್ತದೆ.
* ವಿಟಮಿನ್ ಎ ಮತ್ತು ಇ ಅಂಶ ಹೆಚ್ಚಿರುವ ಪಪ್ಪಾಯ, ಬಾದಾಮಿ, ಕ್ಯಾಪ್ಸಿಕಮ್, ಕ್ಯಾರೆಟ್, ಪಾಲಾಕ್ ಸೊಪ್ಪು, ಮೊಟ್ಟೆ, ಬೆಣ್ಣೆ ಇತ್ಯಾದಿಗಳನ್ನು ಆಹಾರ ಪದ್ದತಿಯಲ್ಲಿ ಸೇರಿಸಿ ಕೊಳ್ಳಬೇಕು.
* ದೇಹದಲ್ಲಿರುವ ನೀರಿನ ಅಂಶ ಮುಖದ ಕಾಂತಿಯ ಮೇಲೆ ಪರಿಣಾಮ ಬೀರುವುದರಿಂದ ಹೆಚ್ಚು ಹೆಚ್ಚು ನೀರು ಕುಡಿಯುವುದು ಅತ್ಯವಶ್ಯಕ. ಆದ್ದರಿಂದ ಪ್ರತಿದಿನವೂ ಸಾಕಷ್ಟು ನೀರನ್ನು ಕುಡಿಯುವುದು ಒಳ್ಳೆಯದು.
* ಚಳಿಗಾಲದಲ್ಲಿ ತುಂಬಾ ಬಿಸಿ ನೀರಿನ ಸ್ನಾನ ಒಳ್ಳೆಯದಲ್ಲ. ಅದು ತ್ವಚೆಯಲ್ಲಿನ ತೇವಾವಂಶವನ್ನು ತೆಗೆಯುವುದರಿಂದ ಒಣ ತ್ವಚೆಗೆ ಕಾರಣವಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡುವುದು ಉತ್ತಮ.
* ಸ್ನಾನ ಮಾಡುವ ಮೊದಲು ಸ್ವಲ್ಪ ಸಕ್ಕರೆ ಮತ್ತು ಆಲಿವ್ ಎಣ್ಣೆಯನ್ನು ಬಳಸಿ ಸ್ಕ್ರಬ್ ಮಾಡುವುದು ಉತ್ತಮ. ಇದು ನಿರ್ಜೀವ ಜೀವಕೋಶಗಳನ್ನು ತೆಗೆದುಹಾಕಿ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.
* ಚಳಿಗಾಲದಲ್ಲಿ ಕೂದಲು ಒಣಗುತ್ತದೆ ಮತ್ತು ಬಿರುಕುಂಟಾಗಿ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಹಚ್ಚುವುದು ಒಳ್ಳೆಯದು.