ಕೆಲವರಿಗೆ ಟೂರ್ ಹೋಗುವುದು ಎಂದರೆ ತುಂಬಾ ಇಷ್ಟ. ಒಬ್ಬೊಬ್ಬರೇ ಹೊರಟು ಬಿಡುತ್ತಾರೆ. ಇದು ಅವರವರ ಆಸಕ್ತಿಗೆ ಬಿಟ್ಟಿದ್ದು. ಬೇಸಿಗೆ ಕಾಲದಲ್ಲಿ ಪ್ರವಾಸಕ್ಕೆ ಹೊರಟರೆ ಹೇಗೋ ನಿಭಾಯಿಸಬಹುದು.
ಆದರೆ ಚಳಿಗಾಲದಲ್ಲಿ ಹಿಮ ಬೀಳುವ ಪ್ರದೇಶಗಳಿಗೆ ಕೆಲವರು ಟೂರ್ ಗೆ ಹೋಗುತ್ತಾರೆ. ಅಂತವರು ಒಂದಷ್ಟು ಜಾಗೃತ ಕ್ರಮಗಳನ್ನು ತೆಗೆದುಕೊಂಡರೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಂಡು ನಿಮ್ಮಿಷ್ಟದ ತಾಣಗಳನ್ನು ನೋಡಿಕೊಂಡು ಬರಬಹುದು .
ಚಳಿಗಾಲದಲ್ಲಿ ಟೂರ್ ಗೆ ಹೋಗುವವರಿಗೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
* ಚಳಿಗಾಲದಲ್ಲಿ ಟೂರ್ ಗೆ ಹೋಗುವವರು ಫ್ಯಾಷನ್ ಉಡುಪಿಗಿಂತ ನಿಮ್ಮನ್ನು ಬೆಚ್ಚಗೆ ಇಡುವ ಉಡುಪಿಗೆ ಹೆಚ್ಚಿನ ಆದ್ಯತೆ ನೀಡಿ. ಮಳೆ, ಹಿಮ, ಗಾಳಿಯಿಂದ ರಕ್ಷಣೆ ಪಡೆಯಲು ನೀವು ಧರಿಸುವ ಉಡುಪು ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಸರಿಯಾದ ಉಡುಪನ್ನು ಪ್ಯಾಕ್ ಮಾಡಿಕೊಳ್ಳಿ. ಹತ್ತಿಯ ಬಟ್ಟೆಗಿಂತ ಉಣ್ಣೆಯ ಬಟ್ಟೆ ಹೆಚ್ಚು ಸೂಕ್ತ.
* ಸರಿಯಾದ ಸ್ಲಿಪಿಂಗ್ ಬ್ಯಾಗ್ ಅನ್ನು ಆರಿಸಿಕೊಳ್ಳಿ. ಚಳಿಗಾಲದ ಕ್ಯಾಂಪ್ ನಲ್ಲಿ ರಾತ್ರಿ ಮಲಗಲು ಆರಾಮದಾಯಕವಾಗಿರುವ ಸ್ಲಿಪಿಂಗ್ ಬ್ಯಾಗ್ ತುಂಬಾ ಅವಶ್ಯಕವಾಗಿರುತ್ತದೆ.
* ವಿಂಟರ್ ಟೂರ್ ಗೆ ಹೊರಡುವವರು ಬೆಳಕಿನ ವ್ಯವಸ್ಥೆಯನ್ನು ಸರಿಯಾಗಿ ಮಾಡಿಕೊಳ್ಳಬೇಕು. ರಾತ್ರಿ ಎಲ್ಲೆಲ್ಲೋ ಕ್ಯಾಂಪ್ ಹಾಕಿದಾಗ ಟಾರ್ಚ್, ಬ್ಯಾಟರಿ ಅಗತ್ಯವಾಗಿ ಬೇಕಾಗುತ್ತದೆ. ಹಿಮವಿರುವ ಕಡೆ ಬ್ಯಾಟರಿ ದೀರ್ಘ ಸಮಯದವರೆಗೆ ಬಾಳಿಕೆ ಬರುವುದಿಲ್ಲ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ಬ್ಯಾಟರಿ ಇಟ್ಟುಕೊಂಡರೆ ಒಳ್ಳೆಯದು.
* ಸುರಕ್ಷತೆಯ ದೃಷ್ಟಿಯಿಂದ ಪ್ರಥಮ ಚಿಕಿತ್ಸಗೆ ಬೇಕಾಗುವ ವಸ್ತುಗಳು, ಬ್ಯಾಂಡೇಜ್, ನೋವು ನಿವಾರಕಗಳನ್ನು ಪ್ಯಾಕ್ ಮಾಡಿಕೊಳ್ಳಿ. ಹಾಗೇ ಕ್ಯಾಂಪಿಂಗ್ ಹೋಗುವವರು ಒಂದು ವಿಷಲ್ ನಿಮ್ಮ ಬಳಿ ಇಟ್ಟುಕೊಳ್ಳಿ. ನಿಮ್ಮ ಸಂಗಡ ಇರುವವರು ತಪ್ಪಿ ಹೋದರೆ ಇದು ಉಪಯೋಗಕ್ಕೆ ಬರುತ್ತದೆ.
* ಸರಿಯಾದ ನ್ಯೂಟ್ರಿಷಿನ್, ಹೈಡ್ರೆಷನ್ ನಿಮ್ಮನ್ನು ಕೊರೆವ ಚಳಿಯಿಂದ ಕಾಪಾಡುತ್ತದೆ. ಸರಿಯಾದ ಆಹಾರದ ವ್ಯವಸ್ಥೆಯನ್ನು ಮಾಡಿಕೊಳ್ಳಿ. ಸರಿಯಾಗಿ ನೀರು ಕುಡಿಯಿರಿ. ಬಿಸಿ ಸೂಪ್, ಹರ್ಬಲ್ ಟೀಯನ್ನು ಆದಷ್ಟು ಕುಡಿಯಿರಿ.