ವಾಹನಗಳ ನಂಬರ್ ಪ್ಲೇಟ್ ಮೇಲೆ ನಿಯಮಬಾಹಿರವಾಗಿ ಸಂಘ-ಸಂಸ್ಥೆಗಳ ಹೆಸರು, ಚಿಹ್ನೆ, ಸರ್ಕಾರದ ಲಾಂಛನವನ್ನು ಹಾಕಿಕೊಂಡವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಇವುಗಳನ್ನು ತೆರವುಗೊಳಿಸಲು ಸಾರಿಗೆ ಇಲಾಖೆ 10 ದಿನಗಳ ಗಡುವು ನೀಡಿದ್ದು, ಆ ಬಳಿಕ ಇಂತಹ ನಂಬರ್ ಪ್ಲೇಟ್ ಹೊಂದಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ.
ಕೆಲವೊಂದು ವಾಹನಗಳ ಮಾಲೀಕರು ತಮ್ಮ ನಂಬರ್ ಪ್ಲೇಟ್ ಗಳ ಮೇಲೆ ನಿಯಮಬಾಹಿರವಾಗಿ ಹೆಸರು ಚಿಹ್ನೆ ಹಾಕಿಸಿಕೊಂಡಿರುವ ಸಂಗತಿ ಗಮನಕ್ಕೆ ಬಂದ ಬಳಿಕ ರಾಜ್ಯ ಹೈಕೋರ್ಟ್, ಇವುಗಳನ್ನು ತೆರವುಗೊಳಿಸಲು ಸರ್ಕಾರಕ್ಕೆ ಸೂಚಿಸಿತ್ತು. ಇಲ್ಲವಾದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿರುವ ಸಾರಿಗೆ ಇಲಾಖೆ, 10 ದಿನಗಳ ಗಡುವು ವಿಧಿಸಿದೆ. ಆ ಬಳಿಕ ಇಂತಹ ನಂಬರ್ ಪ್ಲೇಟ್ ಗಳು ಕಂಡುಬಂದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಅವಧಿ ಮುಗಿದ ಬಳಿಕ ಸಾರ್ವಜನಿಕರು ಸಹ ಇಂತಹ ಅನಧಿಕೃತ ನಂಬರ್ ಪ್ಲೇಟ್ ಕುರಿತ ಮಾಹಿತಿಯನ್ನು ಫೋಟೋ ಸಹಿತ ವಾಟ್ಸಾಪ್ ಸಂಖ್ಯೆ 94498-63459 ಗೆ ಕಳುಹಿಸಬಹುದಾಗಿದೆ.