ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಪ್ರಾದೇಶಿಕ ಸಾರಿಗೆ ಕಚೇರಿ ಮೂಲಕ ಸಾರ್ವಜನಿಕರಿಗೆ ದೊರೆಯುವ 58 ಸೇವೆಗಳು ಆನ್ ಲೈನ್ ನಲ್ಲೂ ಲಭ್ಯವಾಗಲಿದ್ದು, ಇದರಿಂದ ಸಮಯ ಉಳಿಯಲಿದೆ.
ಈ ಮೊದಲು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಲಸ ಮಾಡಿಸಿಕೊಳ್ಳಬೇಕೆಂದರೆ ಪದೇ ಪದೇ ಅಲೆದಾಡಬೇಕಿತ್ತು. ಅಲ್ಲದೆ ಬ್ರೋಕರ್ ಇಲ್ಲದೆ ನೇರವಾಗಿ ಹೋದ ಸಂದರ್ಭದಲ್ಲಿ ಕೆಲಸ ಆಗುವುದು ಹರ ಸಾಹಸವಾಗಿತ್ತು.
ಈ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ಸೇವೆಗಳು ಲಭ್ಯವಾಗುವಂತೆ ಮಾಡಲಾಗಿದ್ದು, ಈ ಸೇವೆಗಳನ್ನು ಪಡೆಯಲು ಆಧಾರ್ ಆಧರಿತ ದೃಢೀಕರಣ ಅಗತ್ಯವಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆನ್ ಲೈನ್ ಸೇವೆ ಕುರಿತ ಅಧಿಸೂಚನೆಯನ್ನು ಶನಿವಾರ ಹೊರಡಿಸಿದೆ.
ಇದರಿಂದಾಗಿ ಸಾರ್ವಜನಿಕರು ವಾಹನ ಚಾಲನೆ ಪರವಾನಗಿ, ವಾಹನ ನೋಂದಣಿ, ವಾಹನ ಮಾಲೀಕತ್ವ ವರ್ಗಾವಣೆ ಸೇರಿದಂತೆ ಹಲವು ಸೇವೆಗಳನ್ನು ಆನ್ ಲೈನ್ ಮೂಲಕ ಪಡೆಯಬಹುದಾಗಿದೆ.