ವಾಹನ ಮಾಲೀಕರಿಗೆ ಮತ್ತೆ ಗುಡ್ ನ್ಯೂಸ್ ಸಿಕ್ಕಿದೆ. ವಾಹನಗಳ ಆರ್.ಸಿ. ಕಲರ್ ಜೆರಾಕ್ಸ್ ಪ್ರತಿ ಕೊಡುವ ಬದಲು ಈ ಮೊದಲಿನಂತೆ ಸ್ಮಾರ್ಟ್ ಕಾರ್ಡ್ ವಿತರಣೆ ವ್ಯವಸ್ಥೆಗೆ ಸಾರಿಗೆ ಇಲಾಖೆ ಚಾಲನೆ ನೀಡಿದೆ.
ಆರ್.ಸಿ. ಸ್ಮಾರ್ಟ್ ಕಾರ್ಡ್ ವಿತರಣೆ ಸ್ಥಗಿತಗೊಳಿಸಿ ಕಲರ್ ಜೆರಾಕ್ಸ್ ಪ್ರತಿ ಕೊಡುವ ವ್ಯವಸ್ಥೆ ಜಾರಿಗೊಳಿಸಿದ್ದರ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಮೂರು ತಿಂಗಳ ಹಿಂದೆಯೇ ಆರ್.ಸಿ. ಸ್ಮಾರ್ಟ್ ಕಾರ್ಡ್ ವಿತರಣೆಗೆ ರಾಜ್ಯ ಹೈಕೋರ್ಟ್ ಸೂಚನೆ ನೀಡಿತ್ತು.
ಮನೆಯ ಈ ಜಾಗದಲ್ಲಿ ‘ಲವಂಗ’ ಅಡಗಿಸಿಟ್ಟರೆ ಖುಲಾಯಿಸಲಿದೆ ನಿಮಗೆ ಅದೃಷ್ಟ
ಆರ್.ಸಿ. ಕಲರ್ ಜೆರಾಕ್ಸ್ ಪ್ರತಿ ನೀಡಲಾಗುತ್ತಿದ್ದ ಕಾರಣ ಇದನ್ನು ರಕ್ಷಿಸಿಕೊಳ್ಳುವುದೇ ವಾಹನ ಮಾಲೀಕರಿಗೆ ದೊಡ್ಡ ಸವಾಲಾಗಿತ್ತು. ಸ್ಮಾರ್ಟ್ ಕಾರ್ಡ್ ನಲ್ಲಿ ಮೈಕ್ರೋ ಚಿಪ್ ಇರುತ್ತಿದ್ದ ಕಾರಣ ವಾಹನದ ಸಂಪೂರ್ಣ ಮಾಹಿತಿ ದೊರೆಯುತ್ತಿದ್ದು, ಎಲ್ಲರಿಗೂ ಅನುಕೂಲವಾಗಿತ್ತು. ಇದೀಗ ಮತ್ತೆ ಮೊದಲಿನ ವ್ಯವಸ್ಥೆ ಜಾರಿಗೊಳಿಸಿರುವುದರಿಂದ ವಾಹನ ಮಾಲೀಕರು ಸಂತಸಗೊಂಡಿದ್ದಾರೆ.