ಜನಸಂಖ್ಯಾ ಸ್ಪೋಟದ ರೀತಿಯಲ್ಲೇ ವಾಹನ ಸಂಖ್ಯಾ ಸ್ಪೋಟ ಕೂಡ ಆಗಿದ್ದು, ಹಲವಾರು ಬಗೆಯ ಹೈಸ್ಪೀಡ್ ವಾಹನಗಳು ಮಾರುಕಟ್ಟೆಗೆ ಬಂದಿವೆ. ಇಂತಹ ಹೈಸ್ಪೀಡ್ ವಾಹನಗಳನ್ನು ಎಗ್ಗಿಲ್ಲದೇ ಓಡಿಸುವುದು ಯುವಕರಿಗಂತೂ ಸಿಕ್ಕಾಪಟ್ಟೆ ಕ್ರೇಜ್.
ನೀವು ವಾಹನ ಓಡಿಸುವಾಗ ಆದಷ್ಟು ಜಾಗ್ರತೆ ವಹಿಸಿರಿ. ಎದುರಿನಿಂದ, ಹಿಂದುಗಡೆಯಿಂದ, ಅಕ್ಕಪಕ್ಕದಲ್ಲಿ ಚಲಿಸುತ್ತಿರುವ ವಾಹನಗಳ ಬಗ್ಗೆ ನಿಗಾ ವಹಿಸಿ. ರಸ್ತೆ ದಾಟುವಾಗ, ಕ್ರಾಸ್ ಮಾಡುವಾಗ ಎರಡೂ ಬದಿಯಲ್ಲಿ ನೋಡಿಕೊಂಡು ಯಾವುದೇ ವಾಹನ ಬರುತ್ತಿಲ್ಲವೆಂಬುದನ್ನು ಖಾತರಿಪಡಿಸಿಕೊಂಡ ನಂತರವೇ ವಾಹನವನ್ನು ಚಲಾಯಿಸಿರಿ, ಅಲ್ಲದೇ, ವಾಹನ ಚಾಲನೆ ಮಾಡುವಾಗ ಮೊಬೈಲ್ ನಲ್ಲಿ ಮಾತನಾಡಬೇಡಿ, ಇದರಿಂದ ನಿಮ್ಮ ಗಮನ ಬೇರೆಡೆ ಹೋಗುವ ಸಾಧ್ಯತೆ ಇರುತ್ತದೆ.
ಅತಿ ವೇಗದ ಚಾಲನೆ ಅಪಾಯಕ್ಕೆ ಆಹ್ವಾನ ನೀಡುತ್ತದೆ. ಯಾವಾಗಲೂ ಮಿನಿಮಮ್ ಸ್ಪೀಡ್ ನಲ್ಲಿ ಹೋಗಿ. ಬೇರೆ ವಾಹನಗಳು ಪಾಸ್ ಆಗಲು ಅವಕಾಶ ಮಾಡಿಕೊಡಿ, ಮದ್ಯಪಾನ ಮಾಡಿ ಗಾಡಿ ಓಡಿಸಬೇಡಿ, ಆದಷ್ಟು ಜಾಗ್ರತೆಯಿಂದ ಸುರಕ್ಷಿತವಾಗಿ ವಾಹನ ಚಲಾಯಿಸಿರಿ. ಕ್ರೇಜ್ ಗಾಗಿ ಹೈಸ್ಪೀಡ್ ಆಗಿ ವಾಹನ ಚಲಾಯಿಸಬೇಡಿ. ಕೆಲವೊಮ್ಮೆ ನಿಮಗೆ ಅಥವಾ ನಿಮ್ಮಿಂದ ಬೇರೆಯವರಿಗೆ ತೊಂದರೆಯಾಗುವ ಸಾಧ್ಯತೆಗಳಿರುತ್ತವೆ ಎಂಬುದನ್ನು ಅರಿಯಿರಿ.